ತ್ರೋಬಾಲ್ ಚಾಂಪಿಯನ್ ಶಿಫ್ ನಲ್ಲಿ ಪ್ರಥಮ ಸ್ಥಾನ ಗೆದ್ದು ಬಂದ ಯುವಕರಿಗೆ ಪದ್ಮುಂಜದಲ್ಲಿ ಗೌರವಾರ್ಪಣೆ

0

ಪದ್ಮುಂಜ: ಬೆಂಗಳೂರಿನಲ್ಲಿ ಸೆ. 24 ರಿಂದ 27ರ ತನಕ ಜ್ಯೂನಿಯರ್ ನ್ಯಾಷನಲ್ ತ್ರೋಬಾಲ್ ಚಾಂಪಿಯನ್ ಶಿಫ್ ನಲ್ಲಿ ಕರ್ನಾಟಕ ತಂಡದಲ್ಲಿ ಪ್ರತಿನಿಧಿಸಿ ಅಂಕಿತ್, ಭವಿಷ್ ಶೆಟ್ಟಿ, ಹರ್ಷ ಕೆ., ಅವರು ಪ್ರಥಮ ಸ್ಥಾನ ಗೆದ್ದು ಬಂದ ಅವರನ್ನು ಪದ್ಮುಂಜ ಬೊಳ್ಳರಮಜಲು ಓಂಕಾರ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಪದ್ಮುಂಜದಲ್ಲಿ ಗೌರವ ಸಮರ್ಪಿಸಲಾಯಿತು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಕ್ರೀಡಾಪಟುಗಳಿಗೆ ಶಾಲು ಹೂ ಹಾರಗಳನ್ನು ಹಾಕಿ ಗೌರವಿಸಿ ಮಾತನಾಡಿ, ಈ ಮೂವರು ಯುವಕರು ತುಂಬಾ ಸಾಧನೆ ಮಾಡುವುದರ ಮೂಲಕ ಪ್ರಥಮ ಸ್ಥಾನದಲ್ಲಿ ಗೆದ್ದು ಬಂದು ಪದ್ಮುಂಜದ ಊರಿಗೆ, ಅವರ ಮನೆಗೆ ತಂದೆ ತಾಯಿಗೆ ಹಾಗೂ ಅವರಿಗೆ ವಿಧ್ಯೆ ಕಲಿಸಿ ಗುರುಗಳಿಗೆ ಕೀರ್ತಿ ತಂದು ಕೊಟ್ಟಿದ್ದಾರೆ. ಅವರ ಭವಿಷ್ಯವು ಇನ್ನಷ್ಟು ಉಜ್ವಲವಾಗಲಿ ಎಂದರು.

ಇನ್ನೋರ್ವ ಅತಿಥಿ ಅಬ್ಬಾಸ್ ಬಟ್ಲಡ್ಕ ಅವರು ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆದರ್ಶ್ ಶೆಟ್ಟಿ, ಗಿರಿಯಪ್ಪ ನಾಯ್ಕ, ಅಣ್ಣು ಸಾಧನ, ವಸಂತ, ಮುಹಮ್ಮದ್ ಖಲಂದರ್, ಪಂ. ಸದಸ್ಯೆ ಸುಮತಿ ಶೆಟ್ಟಿ, ಜನಾರ್ಧನ ಗೌಡ, ಶೇಕರ ಶೆಟ್ಟಿ, ರಮಾನಂದ ಪೂಜಾರಿ, ಸತೀಶ್ ರಾವ್, ಪ್ರವೀನ, ಲಕ್ಷ್ಮಿ, ಶೀಲಾವತಿ ಸೇರಿದಂತೆ ಓಂಕಾರ್ ಫ್ರೆಂಡ್ಸ್ ಕ್ಲಬ್ ಸದಸ್ಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು. ಕಾಸಿಂ ಪದ್ಮುಂಜ ಅವರು ಸ್ವಾಗತಿಸಿದರು. ವಿಠಲ್ ಭಟ್ ಅವರು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here