ಗುರುವಾಯನಕೆರೆ: ಚಾರ್ಮಾಡಿ ಕಡೆಯಿಂದ ಅಕ್ರಮವಾಗಿ ಇನ್ನೋವಾ ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ತೆಗೆದುಕೊಂಡು ಬರುತ್ತಿರುವ ವೇಳೆ ಪೊಲೀಸರು ತಡೆದು ನಿಲ್ಲಿಸಿದ ಘಟನೆ ಗುರುವಾಯನಕೆರೆಯ ವೃತ್ತದಲ್ಲಿ ಆ.13ರಂದು ಬೆಳಗ್ಗೆ ನಡೆದಿತ್ತು.
ಗೋ ಗಳನ್ನು ರಕ್ಷಿಸಿ ನಂದಗೋಕುಲ ಗೋಶಾಲೆಗೆ ಗೋ ಗಳನ್ನು ಕಾನೂನು ರೀತಿಯಲ್ಲಿ ಒಪ್ಪಿಸಲಾಗಿತ್ತು. ಇದೀಗ ಒಂದು ತಿಂಗಳ ಬಳಿಕ ಗೋವು ಹೆಣ್ಣು ಕರುವಿಗೆ ಜನ್ಮ ನೀಡಿದೆ.