ಬೆಳ್ತಂಗಡಿ: ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ವೇಣೂರು ಶಾಖೆಯ ಸದಸ್ಯರಾದ ಗರ್ಡಾಡಿ ಗ್ರಾಮದ ಜಯರಾಮ ಗೌಡ ಅವರ ಶಸ್ತ್ರ ಚಿಕಿತ್ಸೆಗೆ 200000 ರೂ ಮೌಲ್ಯದ ಚೆಕ್ ಹಸ್ತಾಂತರಿಸಲಾಯಿತು. ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ಬೈಕಂಪಾಡಿ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್ ಹಾಗೂ ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ ರಾಜ್ ಎಂ.ಉಪಸ್ಥಿತರಿದ್ದರು.