




ಬೆಳ್ತಂಗಡಿ: ಸೆ.29ರಿಂದ ಅ.2ರವರೆಗೆ ನಡೆಯಲಿರುವ 47ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಉದ್ಘಾಟನಾ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಪಿನಾಕಿ ಸಮಾಜ ಮಂದಿರದಲ್ಲಿ ಸೆ.29ರಂದು ನೆರವೇರಿತು.
ಬೆಳಿಗ್ಗೆ ಗಣಹೋಮ, ಶ್ರೀ ಶಾರದಾ ದೇವಿಯ ಪ್ರತಿಷ್ಟಾ ಕಾರ್ಯಕ್ರಮದ ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಶಶಿಧರ ಶೆಟ್ಟಿ ಬರೋಡ “ನವಶಕ್ತಿ’, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವದಾಸ ಶೆಟ್ಟಿ, ಸುಶೀಲ ಬೆಳ್ತಂಗಡಿ ಭಾಗವಹಿಸಿ ಶುಭ ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ನಾರಾಯಣ ರಾವ್, ಅಧ್ಯಕ್ಷ ಮುರಳೀಧರ ಕೆಲ್ಲಗುತ್ತು, ಉಪಾಧ್ಯಕ್ಷರಾದ ಬೆಳ್ತಂಗಡಿ ಶಕ್ತಿ ಮೆಡಿಕಲ್ಸ್ ಮಾಲಕ ಜಗದೀಶ ಡಿ., ಸಂಜೀವ ಎನ್. ಸಂಜಯನಗರ, ಸುರೇಂದ್ರ ಕೋಟ್ಯಾನ್ ಬೆಳ್ತಂಗಡಿ, ಕರುಣಾಕರ ಬಂಗೇರ ಕೆರಳೇಕೋಡಿ, ಸತೀಶ ಶೆಟ್ಟಿ ‘ದೊಡ್ಡಮನೆ’ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಜೈನ್‌ಪೇಟೆ, ಜತೆಕಾರ್ಯದರ್ಶಿಗಳಾದ ತುಕಾರಾಮ್, ಹರೀಶ್ ಕೆಲ್ಲಗುತ್ತು, ಸಂತೋಷ್ ಕರ್ಕೇರ ಬೆಳ್ತಂಗಡಿ, ಭೋಜರಾಜ್ ಲಾಯಿಲ, ಕೃಷ್ಣಪ್ಪ ಕುಲಾಲ್ ಕಾಶಿಬೆಟ್ಟು, ಕೋಶಾಧಿಕಾರಿ ಬಿ. ಹೆಚ್. ರಾಜು ಸುದೆಮುಗೇರು ಸುಧಾ ಮಣಿ, ಗೌರವ ಸಲಹೆಗಾರರು ಉಪಸ್ಥಿತರಿದ್ದರು. ಕಲಾ ರತ್ನ ರಾಜೀವ್ ಬಿ. ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.


ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸಂಜೆ ಬೆಳ್ತಂಗಡಿ ಶ್ರೀ ಕೃಷ್ಣ ಮುಖ್ಯಪ್ರಾಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಜರುಗಳಿರುವುದು.
ಸೆ.30ರಂದು ಬೆಳಗ್ಗೆ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಭಗವಾನ್ ಶಿರ್ಡಿ ಶ್ರೀ ಸಾಯಿ ಸತ್ಯಸಾಯಿ ಸೇವಾಕ್ಷೇತ್ರ ಶ್ರೀ ಸಾಯಿನಗರ ಬೆಳ್ತಂಗಡಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಕಲಾ ಸಂಗಮ, ಕಲಾ ಸಂಭ್ರಮ ಸ್ಫೂರ್ತಿ ಕಲಾ ಸಂಗಮ, ಬೆಳ್ತಂಗಡಿ ಕಲಾರತ್ನ ಬಿ.ಹೆಚ್. ರಾಜು ಸಾರಥ್ಯದಲ್ಲಿ ಭಕ್ತಿ ರಸಮಂಜರಿ, ಜಾದೂ ಸಮ್ಮಿಲನ, ಮಹಾಪೂಜೆ, ಪ್ರಸಾದ ವಿತರಣೆ ಜಗಲಿರುವುದು.
ಅ.1ರಂದು ಬೆಳಗ್ಗೆ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಸಂಜೆ ಹುಣೆಕಟ್ಟೆ ಶ್ರೀ ರಾಮ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿರುವುದು.
ಅ.2ರಂದು ಬೆಳಗ್ಗೆ ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ಸಂಧ್ಯಾಪೂಜೆ, ಶ್ರೀ ದೇವಿಯ ವಿಗ್ರಹ ವಿಸರ್ಜನಾ ಪೂಜೆ ನಡೆಯುವುದು. ಶೋಭಾಯಾತ್ರೆ ಸಂದರ್ಭದಲ್ಲಿ ಚೆಂಡೆ, ಸ್ಯಾಕ್ರೋಫೋನ್ ವಾದ್ಯಗಳೊಂದಿಗೆ ಹಾಗೂ ಭಜನಾ ತಂಡದಗಳೊಂದಿಗೆ ಬೆಳ್ತಂಗಡಿ ಲಾಯಿಲ ಶ್ರೀ ಗುರುರಾಘವೇಂದ್ರ ಮಠದ ಬಳಿ ಸೋಮಾವತಿ ನದಿಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹದ ವಿಸರ್ಜನೆಯಾಗಲಿದೆ.









