ಬೆಳ್ತಂಗಡಿ: ದಸರಾದ ಹುಲಿ ಕುಣಿತ ತಾಲೂಕಿನಾದ್ಯಂತ ಜೋರಾಗಿದೆ. ಸೆ.27ರಂದು ಬೆಳ್ತಂಗಡಿ ವಕೀಲರ ಸಂಘ ಆಯೋಜಿಸಿದ ಹುಲಿ ಕುಣಿತ ವಕೀಲರ ಭವನದೆದುರು ವೈಭವದಿಂದ ನಡೆಯಿತು.
ಕಳೆದ ಕೆಲ ವರ್ಷಗಳಿಂದ ಧರ್ಮಸ್ಥಳ ಕ್ಲಾಸಿಕ್ ಟೈಗರ್ಸ್ ತಂಡವನ್ನು ಕರೆಸಿ ಹುಲಿಕುಣಿತ ನಡೆಸಲಾಗುತ್ತಿತ್ತು,ಈ ಬಾರಿಯೂ ಕೂಡ ಕ್ಲಾಸಿಕ್ ಟೈಗರ್ಸ್ ತಂಡ ವಕೀಲರ ಭವನದೆದುರು ಹುಲಿಕುಣಿತ ನಡೆಸಿತು.
ಈ ವೇಳೆ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್., ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ., ಹಿರಿಯ ಸಮಿತಿಯ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ, ದಿನೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ವಿನಯ ಕುಮಾರ್ ಎಂ., ಉಮೇಶ್ ದೇವಾಡಿಗ, ಎ.ಪಿ.ಪಿ ದಿವ್ಯಾರಾಜ್ ಹೆಗ್ಡೆ, ಹಿರಿಯ ವಕೀಲರಾದ ಶಿವಕುಮಾರ್ ಎಸ್. ಎಂ., ರಾಧಾಕೃಷ್ಣ ವೈ., ಕಿರಿಯ ವಕೀಲರಾದ ಹರಿಪ್ರಕಾಶ್ ಪಿ., ಆನಂದ್ ಕುಮಾರ್ ಎಂ.ಸಿ., ಉದಯ ಬಿ.ಕೆ., ಸಂದೇಶ್ ಕುಮಾರ್, ವಿನೋಧರ, ಜೋಬಿ ಜೋಯ್, ಚಿರಾಗ್, ಅಭಿನ್, ಸಂದೀಪ್ ಡಿಸೋಜ, ಜೋಸ್ನ ಕೋರೆಯ, ಉಷಾ ಹಾಗೂ ಇತರ ವಕೀಲರು, ನ್ಯಾಯಾಲಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.