ಅರಸಿನಮಕ್ಕಿ: ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿ.ಡಿ.ಓ ಜಯರಾಜ್ ಅವರು ನೆಲ್ಯಾಡಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಗೊಂಡಿದ್ದು ಅವರ ಉತ್ತಮ ಸೇವೆಯನ್ನು ಮೆಚ್ಚಿ ಪಂಚಾಯತ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್. ಪಂಚಾಯತ್ ಸದಸ್ಯರು, ಹಾಲಿ ಪಿಡಿಒ ರಾಘವೇಂದ್ರ ಗೌಡ, ಪಂಚಾಯತ್ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ., ಎಲ್.ಸಿ.ಆರ್.ಪಿ ಗಳು ಮತ್ತು ಸದಸ್ಯರು ಗ್ರಾಮಸ್ಥರು
ಉಪಸ್ಥಿತರಿದ್ದು ಸನ್ಮಾನ ಮಾಡಿ ಬೀಳ್ಕೊಟ್ಟರು.