ಧರ್ಮಸ್ಥಳ: ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್‌ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ ನವದುರ್ಗೆಯರ ದಿವ್ಯ ಸಾನಿಧ್ಯದಲ್ಲಿ ಕ್ಷೇತ್ರದ ಪೀಠಾಧೀಶ ಮಹಾ
ಮಂಡಲೇಶ್ವರ 1008 ಸ್ವಾಮಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ದಿವ್ಯ ಉಪಸ್ಥಿತಿಯಲ್ಲಿ ಸೆ. 22ರಿಂದ ನವರಾತ್ರಿ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಯಿತು.
ಸೆ. 22ರಂದು ಶೈಲಪುತ್ರಿ ದೇವಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅನ್ನಛತ್ರ ವಿಶೇಷ ಪೂಜೆ, ಸೆ. 23 ರಂದು ಬ್ರಾಹ್ಮಣಿ ದೇವಿಗೆ, 24ರಂದು ಚಂದ್ರಘಂಟಾ ದೇವಿಗೆ,25ರಂದು ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, 26ರಂದು ಸ್ಕಂದಮಾತ ದೇವಿಗೆ ಮತ್ತು ಶ್ರೀದುರ್ಗಾ ಪರಮೇಶ್ವರಿ ವಿಶೇಷ ಪೂಜೆ, ಚಂಡಿಕಾ ಹೋಮ ನಡೆಯಿತು.
ಸೇವಾಕರ್ತರು, ಭಕ್ತರುಉಪಸ್ಥಿತರಿದ್ದರು.
27ರಂದು ಕಾತ್ಯಾಯಿನಿ ದೇವಿಗೆ, 28ರಂದು ಕಾಳರಾತ್ರಿ ದೇವಿಗೆ, 29ರಂದು ಮಹಾಗೌರಿ ದೇವಿಗೆ, 30ರಂದು ಸಿದ್ದಿದಾತ್ರಿ ದೇವಿಗೆ ವಿಶೇಷ ಪೂಜೆ, ಅ. 1ರಂದು ಆಯುಧ ಪೂಜೆ, ಅ. 2 ವಿಜಯದಶಮಿ ವಿಶೇಷ ಪೂಜೆ ನಡೆಯಲಿದೆ.