ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಲ್. ಭೈರಪ್ಪರಿಗೆ ನುಡಿನಮನ

0

ಬೆಳ್ತಂಗಡಿ: ಸಾಹಿತಿಕವಾಗಿ ಮತ್ತು ಸಾಮಾಜಿಕವಾಗಿ ತುಂಬು ಬದುಕನ್ನು ನಡೆಸಿದ ಎಸ್. ಎಲ್. ಭೈರಪ್ಪ ಅವರ ವ್ಯಕ್ತಿತ್ವ ಆದರ್ಶಪ್ರಾಯವಾದದ್ದು ಎಂದು ವಾಣಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಅಭ್ಯುದಯ ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಆಶ್ರಯದಲ್ಲಿ ಜರುಗಿದ ಎಸ್. ಎಲ್. ಬೈರಪ್ಪ ಅವರಿಗೆ ನುಡಿ ನಮನ ಸಲ್ಲಿಸುತ್ತಾ, ಭೈರಪ್ಪ ಅವರ ಕೃತಿಗಳಲ್ಲಿ ಎಲ್ಲವನ್ನೂ ಪ್ರಶ್ನಿಸುವಂತಹ ಮನೋಧಾಡ್ಯತೆ ಕಂಡು ಬರುತ್ತಿದ್ದು, ಸಾಮಾಜಿಕ ಸಂಘರ್ಷ, ಇತಿಹಾಸ, ಧರ್ಮ, ಶಿಕ್ಷಣ, ತತ್ವಶಾಸ್ತ್ರ ಮುಂತಾದ ವಿಷಯಗಳು ತಿಳಿದು ಬರುತ್ತದೆ. ಮನುಷ್ಯ ಸಂಬಂಧದ ಆಳಕ್ಕೆ ಇಳಿದು ನೈತಿಕ ಮೌಲ್ಯಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳು ಭೈರಪ್ಪರಂತಹ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಹಾಗೂ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಂಯೋಜಕಿ ರಮ್ಯಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.
‌‌

LEAVE A REPLY

Please enter your comment!
Please enter your name here