ಬೆಳ್ತಂಗಡಿ: ನಮ್ಮ ತಾಲೂಕಿನ ಪ್ರತಿಭಾನ್ವಿತ ಮಕ್ಜಳಿಗೆ ಉತ್ತಮ ವೇದಿಕೆ ಹಾಗೂ ಅವಕಾಶ ಕಲ್ಪಿಸಿಕೊಡುವ ಸದುದ್ದೇಶದಿಂದ ಸುದ್ದಿ ಸಮೂಹ ಸಂಸ್ಥೆ ಬೆಳ್ತಂಗಡಿ ಇದೇ ಬರುವ ಅಕ್ಟೋಬರ್ ೨ ರಂದು ನವರಾತ್ರಿ ಹಬ್ಬದ ಪ್ರಯುಕ್ತ ʼನೃತ್ಯ ವೈಭವʼ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿಯ ನ್ಯಾಯವಾದಿ ಮುರಳಿ ಬಲಿಪ ಹಾಗೂ ಮಹಾವೀರ್ ಟಕ್ಸ್ ಟೈಲ್ಸ್ ಉಜಿರೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ. ನವರಾತ್ರಿಯಲ್ಲಿ ಆರಾಧಿಸುವ ನವದುರ್ಗೆಯರಿಗೆ ಸಂಬಂಧಿಸಿ ನೃತ್ಯ ರೂಪಕವನ್ನು ಈ ಸ್ಪರ್ಧೆಯಲ್ಲಿ ಮಾಡುವ ಅವಕಾಶ ನೀಡಲಾಗಿದ್ದು, ಸಂಪೂರ್ಣ ಕಾರ್ಯಕ್ರಮ ಸುದ್ದಿ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.
ಬಹುಮಾನ ವಿವರ:
ಪ್ರಥಮ- 5000 + ಟ್ರೋಫಿ
ದ್ವಿತೀಯ- 3000 + ಟ್ರೋಫಿ
ಸೂಚನೆಗಳು:
1)ತಂಡದಲ್ಲಿ ಕನಿಷ್ಠ ೩ಮಂದಿ ಮತ್ತು ಗರಿಷ್ಠ ಮಿತಿ ಇಲ್ಲ.
2)ತಂಡಕ್ಕೆ 5ನಿಮಿಷ ನೃತ್ಯಕ್ಕೆ 2ನಿಮಿಷ ವೇದಿಕೆ ಸಿದ್ಧಪಡಿಸಲು ಸಮಯ ಇದೆ.
3) ಯಾವುದೇ ಜಾತಿ,ಧರ್ಮ,ನಂಬಿಕೆಗೆ ಧಕ್ಕೆ ಉಂಟುಮಾಡುವ ಮತ್ತು ಅಶ್ಲೀಲ ವೇಷಭೂಷಣ ಮತ್ತು ನೃತ್ಯಗಳಿಗೆ ಅವಕಾಶ ಇಲ್ಲ.
4)ವೇದಿಕೆಯಲ್ಲಿ ಬೆಂಕಿ ಅಥವಾ ಇತರ ಅವಘಡ ಸಂಭವಿಸುವ ವಸ್ತುಗಳನ್ನು ಬಳಸುವಂತಿಲ್ಲ,ದೀಪವನ್ನು ಹೊರತುಪಡಿಸಿ.
5)ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
6)ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮ.
ಪ್ರಾಯೋಜಕರ ಕುರಿತಾಗಿ: ಮುರಳಿ ಬಲಿಪ- ಬೆಳ್ತಂಗಡಿಯ ಮುರಳಿ ಬಲಿಪ ಕಳೆದ ೨೬ ವರ್ಷಗಳಿಂದ ಯಶಸ್ವಿ ನ್ಯಾಯವಾದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ನೋಟರಿ ಪಬ್ಲಿಕ್ ಆಗಿಯೂ ಕಾರ್ಯೋನ್ಮುಖರಾಗಿರುವ ಬಲಿಪರಿಗೆ ಸಮಾಜ ಸೇವೆಯೇ ಮುಖ್ಯ ಧ್ಯೇಯ. ಮುರಳಿ ಬಲಿಪ ಉದಾರತೆಗೆ ಉದಾಹರಣೆಗಾಗಿ ಅವರ ಕಚೇರಿ ಉದ್ಘಾಟನೆಯಂದು ಸಭಾ ಕಾರ್ಯಕ್ರಮ ಮಾಡದೆ ೫ ಅಶಕ್ತ ರೋಗಿಗಳಿಗೆ ಧನಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿ ವರ್ಷ 10 ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡು ಐದರಿಂದ ಆರು ಲಕ್ಷ ವೆಚ್ಚ ಮಾಡಿ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಬೇಕಾಗುವಷ್ಟು ಪುಸ್ತಕ ನೀಡುತ್ತಾ ಬಂದಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಎಂಡೋ ಸಲ್ಫಾನ್ ಪೀಡಿತರಿಗೆ, ಅನಾರೋಗ್ಯ ಪೀಡಿತರಿಗೆ ಅಶಕ್ತ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಹಿರಿತನ ಹೊಂದಿರುವ ಬಲಿಪರಿಗೆ ಕಲೆ,ಸಾಹಿತ್ಯ, ನಾಟಕದ ಮೇಲೂ ವಿಶೇಷ ಅಭಿರುಚಿ. ಈ ಹಿನ್ನೆಲೆ ಸುದ್ದಿ ಸಮೂಹ ಸಂಸ್ಥೆ ಬೆಳ್ತಂಗಡಿ ಆಯೋಜಿಸಿರುವ ನೃತ್ಯ ವೈಭವ ಕಾರ್ಯಕ್ರಮಕ್ಕೆ ಮುಕ್ತ ಮನಸ್ಸಿನಿಂದ ಪ್ರಾಯೋಜಕತ್ವ ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಅ. 2ರಂದು ನಡೆಯುವ ನೃತ್ಯ ವೈಭವ ಕಾರ್ಯಕ್ರಮಕ್ಕೆ ಇವರು ಅತಿಥಿಯಾಗಿ ಆಗಮಿಸಲಿದ್ದಾರೆ.
ಮಹಾವೀರ ಗ್ರೂಪ್ಸ್ ಉಜಿರೆ: ಕಳೆದ 20 ವರ್ಷಗಳಿಂದ ಉಜಿರೆಯಲ್ಲಿ ಪ್ರಭಾಕರ್ ಹೆಗ್ಡೆ, ಪುನೀತಾ ಪ್ರಭಾಕರ್ ಹೆಗ್ಡೆ, ದಿವಾಕರ ಹೆಗ್ಡೆ, ಮಂಜುಶ್ರೀ ಹೆಗ್ಡೆ, ರತ್ನಾಕರ್ ಹೆಗ್ಡೆ, ಶ್ರುತಿ ಹೆಗ್ಡೆ ಇವರ ಸಾರಥ್ಯದ ಮಹಾವೀರ ಗ್ರೂಪ್ಸ್ ಬೆಳ್ತಂಗಡಿಗೊಂದು ಮಹಾಕೊಡುಗೆ. ಇದರಡಿ ಉಜಿರೆಯಲ್ಲಿ ಮಹಾವೀರ ಸಿಲ್ಸ್ ರೆಡಿಮೇಡ್ ಆಂಡ್ ಟೆಕ್ಸ್ ಟೈಲ್ಸ್ , ಮಹಾವೀರ ಏಜೆನ್ಸಿ, ಮಹಾವೀರ ಸ್ಟೋರ್ಸ್, ಡಿಸ್ಟ್ರಿಬ್ಯೂಟರ್ಸ್ ಹಾಗೂ ಉಜಿರೆ ಸೇರಿದಂತೆ ಬೆಳ್ತಂಗಡಿ ಹಾಗೂ ಧರ್ಮಸ್ಥಳದಲ್ಲಿ ಮಹಾವೀರ ಸೂಪರ್ ಮಾರ್ಕೆಟ್ ಇದೆ. ನಿಮ್ಮ ಮನೆಗೆ ಬೇಕಾದ ಎ ಟು ಝೆಡ್ ವಸ್ತುಗಳು, ಸಭೆ ಸಮಾರಂಭಕ್ಕೆ ಬೇಕಾದ ಉತ್ತಮ ಗುಣಮಟ್ಟದ ಉಡುಗೆಗಳು, ದಿನಸಿ ಸಾಮಾಗ್ರಿಗಳು ಎಲ್ಲವೂ ಮಹಾವೀರ ಗ್ರೂಪ್ ನೀಡುತ್ತಾ ಬಂದಿದೆ. ವಿಶೇಷವಾಗಿ ಉಜಿರೆಯ ಹೃದಯ ಭಾಗದಲ್ಲಿರುವ ಮಹಾವೀರ ಸಿಲ್ಕ್ಸ್, ರೆಡಿಮೇಡ್ ಆಂಡ್ ಟೆಕ್ಸ್ ಟೈಲ್ಸ್‌ನಲ್ಲಿ ಮದುವೆ, ಸಮಾರಂಭಗಳಿಗೆ ಮನೆಯ ಪೂರ್ತಿ ಸದಸ್ಯರಿಗೆ ಸರಿಹೊಂದುವಂತಹ ಎಲ್ಲಾ ರೀತಿಯ ಬಟ್ಟೆ ಬರೆಗಳು ಸಿಗುತ್ತವೆ. ಇವರು ಆಕರ್ಷಕ ಆಫರ್ ಗಳನ್ನು ನೀಡುವ ಮೂಲಕ ಗ್ರಾಹಕ ಸ್ನೇಹಿ ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ. ಇವರ ನಗುಮೊಗದ ಆದರದ ಸ್ವಾಗತ ಹಾಗೂ ಉತ್ತಮ ಸೇವೆಗೆ ಬೆಳ್ತಂಗಡಿಯ ಅನೇಕ ಗ್ರಾಹಕರನ್ನು ಮಹಾವೀರ ಗ್ರೂಪ್ ಬರಸೆಳೆದಿದೆ. ಕಲೆ ಸಾಹಿತ್ಯ ಮೇಲೆ ವಿಶೇಷ ಅಭಿಮಾನ ಇರುವ ಈ ಕುಟುಂಬ ಇದೀಗ ಸುದ್ದಿ ಸಮೂಹ ಸಂಸ್ಥೆ ಆಯೋಜಿಸಿರುವ ನೃತ್ಯ ವೈಭವ ಕಾರ್ಯಕ್ರಮಕ್ಕೆ ಮುಕ್ತ ಮನಸ್ಸಿನಿಂದ ಪ್ರಾಯೋಜಕತ್ವ ನೀಡುವ ಮೂಲಕ ಸಹಕಾರ ನೀಡಿದ್ದಾರೆ. ಅಕ್ಟೋಬರ್ 2 ರಂದು ನಡೆಯುವ ನೃತ್ಯ ವೈಭವ ಕಾರ್ಯಕ್ರಮಕ್ಕೆ ಪ್ರಭಾಕರ್ ಹೆಗ್ಡೆ ಹಾಗೂ ಪುನೀತಾ ಪ್ರಭಾಕರ್ ಹೆಗ್ಡೆ ಅತಿಥಿಯಾಗಿ ಆಗಮಿಸಲಿದ್ದು, ಸ್ಪರ್ಧಿಗಳನ್ನು ಪ್ರೋತ್ಸಾಹಿಸಲಿದ್ದಾರೆ.