ಬೆಳ್ತಂಗಡಿ: ಬಂಗ್ಲೆ ಗುಡ್ಡೆಯ ಶೋಧ ಕಾರ್ಯದಲ್ಲಿ ಸೆ.17ರಂದು ಪತ್ತೆಯಾದ ಒಂದು ಅಸ್ಥಿಪಂಜರದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸಿಕ್ಕ ಬುರುಡೆ ಮತ್ತು ಅಸ್ಥಿಪಂಜರದ ಜೊತೆ ಸಿಕ್ಕಿರುವ ಐಡಿ ಕಾರ್ಡ್ ಮೂಲಕ ಗುರುತು ಪತ್ತೆ ಮಾಡಲಾಗಿದೆ.
ಕೊಡಗು ಮೂಲದ ಯು.ಬಿ. ಅಯ್ಯಪ್ಪ ಎಂಬುವರಿಗೆ ಸೇರಿದ ಐಡಿ ಕಾರ್ಡ್ ಅದಾಗಿದ್ದು, ಅವರು ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದವರಾಗಿದ್ದು ಏಳು ವರ್ಷಗಳ ಹಿಂದೆ ಕಾಣೆಯಾಗಿದ್ದರು.
ಮೈಸೂರಿಗೆ ಚಿಕಿತ್ಸೆಗೆಂದು ತೆರಳಿದವರು ನಾಪತ್ತೆಯಾಗಿದ್ದರ ಬಗ್ಗೆ
ಕುಟುಂಬಸ್ಥರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು.