ಉಜಿರೆಯ ಮೊನಾಲ್ ಜಿಯಾ ರಸ್ಕಿನ್ಹಾ ಅವರಿಗೆ ಸೆಮಾಫೋರ್ ಸ್ಪರ್ಧೆಯಲ್ಲಿ ಕಂಚಿನ ಪದಕ:

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತೃತೀಯ ವರ್ಷದ ಬಿಸಿಎ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಮೋನಲ್ ಜಿಯಾ ರಸ್ಕಿನ್ಹಾ ಅವರು ಆಲ್ ಇಂಡಿಯಾ ನೌ ಸೈನಿಕ್ ಶಿಬಿರ-2025ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿ ಸೆಮಾಫೋರ್ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಪಡೆದುಕೊಂಡು ತಂಡಕ್ಕೆ ಸಮಗ್ರ ಚಾಂಪಿಯನ್ ಶಿಪ್ ದೊರಕಿಸಿಕೊಟ್ಟಿದ್ದಾರೆ.

ಇವರು ಉಜಿರೆ ಸುರ್ಯ ನಿವಾಸಿ ಐವನ್ ಮೋವಿನ್ ರಸ್ಕಿನ್ಹಾ ಮತ್ತು ಜೆಸಿಂತಾ ರೆಸ್ಕಿನ್ಹಾ ಅವರ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here