ಚಾರ್ಮಾಡಿ: ಅಕ್ರಮವಾಗಿ ಕಕ್ಕಿಂಜೆ ಕಡೆಯಿಂದ ಚಾರ್ಮಾಡಿ ಕಡೆಗೆ ಮರಳು ಸಾಗಾಟ ಮಾಡುತಿದ್ದ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದ ಘಟನೆ ಸೆ. 15ರಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಸಮೀರ್ ಗೆ ಸೇರಿದ KA.41.C. 0557 ವಾಹನದಲ್ಲಿ ಎಂ ಸ್ಯಾಂಡ್ ತೆಗೆದುಕೊಂಡು ಹೋಗುವ ಅನುಮತಿಯನ್ನು ಪಡೆದುಕೊಂಡು ಟಿಪ್ಪರಿನ ಕೆಲ ಭಾಗದಲ್ಲಿ ಮರಳನ್ನು ತುಂಬಿಸಿ ಮೇಲ್ಭಾಗದಲ್ಲಿ ಎಂ. ಸ್ಯಾಂಡ್ ತುಂಬಿಸಿಕೊಂಡು ಬರುತ್ತಿರುವ ವೇಳೆ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸುವಾಗ ಅಕ್ರಮ ಮರಳು ಸಾಗಾಟ ಕಂಡುಬಂದಿದ್ದು ತಕ್ಷಣ ಪರಿಶೀಲಿಸಿ ಎಫ್ ಫೈಯರ್ ದಾಖಲಿಸಿಕೊಂಡಿದ್ದಾರೆ.