ಕುತ್ಲೂರು: ಅಂಗನವಾಡಿ ಕೇಂದ್ರದಲ್ಲಿ ಸೆ.17ರಂದು ಪೋಷನ್ ಮಾಸಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು. ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವ ಮಕ್ಕಳ ತಾಯಂದಿರು, ರಕ್ಷಾ ಸ್ತ್ರೀ ಶಕ್ತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಸುತ್ತಮುತ್ತಲು ದೊರಕುವ ಸೊಪ್ಪು ತರಕಾರಿಗಳನ್ನು ಉಪಯೋಗಿಸಿ ವಿವಿಧ ರೀತಿಯ ಪೌಷ್ಟಿಕಾಂಶಯುಕ್ತ ಖಾದ್ಯಗಳನ್ನು ತಯಾರಿಸಿ ಇದರ ಮಹತ್ವ ಮತ್ತು ನಮ್ಮ ಆರೋಗ್ಯಕ್ಕೆ ಇದರಿಂದ ಸಿಗುವ ಉಪಯೋಗದ ಬಗ್ಗೆ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಕಾರ್ಯಕರ್ತೆ ಮಮತಾ ಅವರು ಸವಿವರವಾಗಿ ತಿಳಿಸಿದರು. ಅದೇ ರೀತಿ ಪ್ರತಿದಿನ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಾರ್ಬೋಹೈಡ್ರೇಡ್ ವಿಟಮಿನ್ ಇವೆಲ್ಲದರ ಪ್ರಮಾಣವನ್ನು ವಿವರಿಸಿದರು. ಇದರ ಜೊತೆಗೆ ಭಾರತ ಸರ್ಕಾರವು ಈ ದಿನ ಪ್ರಾರಂಭಿಸಿದ ಸ್ವಾಸ್ಥ್ಯ ನಾರಿ ಸಶಕ್ತ ಕುಟುಂಬ ಅಭಿಯಾನದ ಅಂಗವಾಗಿ ಬಂದ ತಾಯಂದಿರ ಹಾಗೂ ಸ್ತ್ರೀ ಶಕ್ತಿ ಸದಸ್ಯರ ಶುಗರ್ ಲೆವೆಲ್ ಮತ್ತು ಬಿಪಿ ಪರೀಕ್ಷೆ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಾ ಸ್ತ್ರೀ ಶಕ್ತಿ ಸದಸ್ಯರು, ತಾಯಂದಿರು, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಮಮತಾ, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಭವಾನಿ, ಅಂಗನವಾಡಿ ಕಾರ್ಯಕರ್ತೆ ಅಕ್ಷತಾ ಮತ್ತು ಸಹಾಯಕಿ ಹರಿಣಾಕ್ಷಿ ಉಪಸ್ಥಿತರಿದ್ದರು.