ಮಡಂತ್ಯಾರು: ಅತ್ಯುತ್ತಮ ಶಿಕ್ಷಕರಾಗಿ ನಿವೃತ್ತಿ ಹೊಂದಿರುವ ಜೆರಾಲ್ಡ್ ಮೊರಾಸ್ ಅವರು ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಸಂಸ್ಥೆಗಳ ಆಡಳಿತ ಮಂಡಳಿಯ ಸಧ್ಯಸರು, ಸೆಕ್ರೆಡ್ ಹಾರ್ಟ್ ಚರ್ಚ್ ಉಪಾಧ್ಯಕ್ಷರು, ಬೆಳ್ತಂಗಡಿ ವಾರಡೊ ಪಾಲನ ಮಂಡಳಿಯ ಕಾರ್ಯದರ್ಶಿ, ವಾರ್ಡ್ ಗುರಿಕಾರರು, ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಅದೇ ಶಾಲಾ ಶತಮಾನೋತ್ತರ ಬೆಳ್ಳಿ ಸಮಿತಿಯ ಅಧ್ಯಕ್ಷರು ಆಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 24ರಂದು ಬೆಂಗಳೂರು ಕನ್ನಡ ಭವನದ ರವೀಂದ್ರ ಕಲಾ ಭವನದಲ್ಲಿ ಜರಗಲಿದೆ.