ಬೆಳ್ತಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಮಟ್ಟದ ಇಬ್ಬನಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆಯನ್ನು ಸೆ.15ರಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಹರಿಣಾಕ್ಷಿ ವಹಿಸಿದ್ದರು. ಹರಿಣಾಕ್ಷಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. MBK ಪವಿತ್ರ ಒಂದು ವರ್ಷದ ವರದಿ ಹಾಗೂ ಜಮಖರ್ಚಿನ ವರದಿಯನ್ನು ಮಂಡಿಸಿದರು. ಅದರ ಅನುಮೋದನೆ ಪಡೆಯಲಾಯಿತು.
ವಲಯ ಮೇಲ್ವಿಚಾರಕರು ಸ್ವಸ್ತಿಕ್ ಜೈನ್ ಮಾತನಾಡಿ ಸಂಜೀವಿನಿ ಯೋಜನೆ ಬಗ್ಗೆ, ಅದರ ದ್ಯೇಯೋದ್ದೇಶ ಬಗ್ಗೆ ಜೀವನೋಪಾಯ ಚಟುವಟಿಕೆ, ಒಕ್ಕೂಟದ ಬಗ್ಗೆ, ಬ್ಯಾಂಕ್ ಲೋನಿನ ಬಗ್ಗೆ, ಇತರ ಹಲವು ವಿಷಯದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಹಾಗೂ ಮಾದಕ ಪದಾರ್ಥಗಳ ವ್ಯಸನ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮದ ಕುರಿತು ಪ್ರತಿಜ್ಞೆಯನ್ನು ಮಾಡಿಸಿದರು. ಲಿಂಗತ್ವದ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದರು.
ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಸಂಜೀವಿನಿ ಸಂಘ ರಚನೆ ಮಾಡುವ ಹಾಗೂ ಸಹಕಾರಿ ಬ್ಯಾಂಕಿನಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಹರಿಣಾಕ್ಷಿ ಅವರು ಅಧ್ಯಕ್ಷರಾದ ಮೇಲೆ ಆದ ಅನುಭವವನ್ನು ಹಂಚಿಕೊಂಡರು. ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಅಧಿಕಾರ ಹಸ್ತಾಂತರ ಮಾಡಲಾಯಿತು. ನಿರ್ಗಮಿತ ಪದಾಧಿಕಾರಿಗಳಿಗೆ ಸ್ಮರಣೆಗೆ ನೀಡಿ ಗೌರವಿಸಲಾಯಿತು.
ಗುರು ಕೃಪಾ ಸಂಘದ ಸದಸ್ಯೆ ಮಮತಾ ಪ್ರಾರ್ಥಿಸಿದರು. ಕೃಷಿ ಸಖಿ ದಿವ್ಯಾ ಸ್ವಾಗತಿಸಿದರು. ಎಲ್.ಸಿ.ಆರ್.ಪಿ ಉಷಾ ಮತ್ತು ಲೀಲಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಪಶು ಸಖಿ ವಸಂತಿ ಬಿ. ಧನ್ಯವಾದ ಮಾಡಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.