ಶಿಬರಾಜೆ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ನಡೆಸಲ್ಪಡುವ ಜೇಸಿ ಸಪ್ತಾಹದ ಅಂಗವಾಗಿ ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕದಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತಿ ನಡೆಯಿತು. ಮನಸ್ಸನ್ನು ಗೆದ್ದವನೇ ಪರೀಕ್ಷೆಯನ್ನು ಗೆಲ್ಲುತ್ತಾನೆ ವಿಷಯವಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಎಸ್. ಆರ್. ಲಿಸ್ನಾ ಮ್ಯಾತ್ಯು ಮತ್ತು ಜೆ.ಎಫ್.ಡಿ ಶಂಕರ್ ರಾವ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜೇಸಿ ಅಧ್ಯಕ್ಷೆ ಶೋಭಾ ಪಿ. ಜೈನ್ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಜೈನ್ ವಲಂಬಳ, ಜೆಸಿ ಎಲ್.ಟಿ. ದಕ್ಷ ಜೈನ್ ಅಕ್ಷತ್ ರೈ ಮತ್ತು ಶಾಲಾ ಶಿಕ್ಷಕರು SDMC ಅಧ್ಯಕ್ಷರು, ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜೆಸಿ ವಾಣಿಯನ್ನು ಅಧ್ಯಾ ಜೈನ್ ವಾಚಿಸಿ ಕಾರ್ಯದರ್ಶಿ ಚಂದನಾ ಪಿ. ಧನ್ಯವಾದವಿತ್ತರು.