ಶಿಶಿಲ: ಇತಿಹಾಸ ಪ್ರಸಿದ್ಧ ಶಿಶಿಲೇಶ್ವರ ದೇವಳದ ಆಡಳಿತ ಮಂಡಳಿ ಭಾರಿ ಗೊಂದಲಗಳ ನಡುವೆ ಇತ್ತೀಚಿಗಷ್ಟೇ ರಚನೆಗೊಂಡಿದೆ. ಆಡಳಿತ ಮಂಡಳಿ ಜೊತೆಗೆ ಅಭಿವೃದ್ಧಿ ಸಮಿತಿಯನ್ನು ಆಡಳಿತ ಸದಸ್ಯರು ಮತ್ತು ಊರಿನವರ ಸಮ್ಮುಖದಲ್ಲಿ ರಚನೆ ಮಾಡಿದ್ದು ಈ ಸಮಿತಿಯ ಅಧ್ಯಕ್ಷರಾಗಿ ಸೂರಜ್ ನೆಲ್ಲಿತ್ತಾಯ ಆಯ್ಕೆಗೊಂಡಿದ್ದಾರೆ.
ಶಿಶಿಲೇಶ್ವರ ದೇವಸ್ಥಾನಕ್ಕೆ ಅನೇಕ ಪರವೂರಿನ ಭಕ್ತರು ಆಗಮಿಸುವುದರಿಂದ ಇಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಇತ್ತ ಕಡೆ ಶಾಸಕರು, ಸಂಸದರು ಮತ್ತು ರಾಜ್ಯ ಸರಕಾರ ಹೆಚ್ಚಿನ ಮೃತುವರ್ಜಿ ವಹಿಸಿ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕಿದೆ ಇತ್ತೀಚಿನ ದಿನಗಳಲ್ಲಿ ಸುರಿದ ಭಾರಿ ಮಳೆಯಿಂದ ನೆರೆ ಬಂದು ಇಲ್ಲಿನ ತಡೆ ಗೋಡೆ ಕುಸಿದಿದ್ದು ಇದರ ಮರು ನಿರ್ಮಾಣಕ್ಕೆ ಸರಕಾರ ಹೆಚ್ಚಿನ ಮೊತ್ತ ನೀಡಿ ಸಹಕರಿಸಬೇಕಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರಜ್ ನೆಲ್ಲಿತ್ತಾಯ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.