ಶಿಬರಾಜೆ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಜೇಸಿ ಸಪ್ತಾಹ 2025ಕ್ಕೆ ಚಾಲನೆ

0

ಶಿಬರಾಜೆ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ನಡೆಸಲ್ಪಡುವ ಜೇಸಿ ಸಪ್ತಾಹ 2025ಕ್ಕೆ ಸೆ.9ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ
ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ ಚಾಲನೆ ನೀಡಿದರು.

ಜೇಸಿ ಸಪ್ತಾಹದ ಎರಡನೇ ದಿನದಂದು ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕ ದಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತಿ ದಿನದ ಅಂಗವಾಗಿ ಮನಸ್ಸನ್ನು ಗೆದ್ದವನೇ ಪರೀಕ್ಷೆಯನ್ನು ಗೆಲ್ಲುತ್ತಾನೆ. ವಿಷಯವಾಗಿ ತರಬೇತಿ ನಡೆಯಲಿದ್ದು, ಎಸ್. ಆರ್. ಲಿಸ್ನಾ ಮ್ಯಾತ್ಯು ಮತ್ತು ಜೆ.ಎಫ್.ಡಿ ಶಂಕರ್ ರಾವ್ ಭಾಗವಹಿಸಲಿದ್ದಾರೆ.

ಅದೇ ದಿನ ಮದ್ಯಾಹ್ನ ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೌತಡ್ಕದಲ್ಲಿ ಜೇಸಿ ವತಿಯಿಂದ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ರಸಾದ್ ಮತ್ತು ಮುಖ್ಯ ಶಿಕ್ಷಕಿ ಜ್ಯೋತಿ ಹೆಬ್ಬಾರ್ ಭಾಗವಹಿಸಲಿದ್ದಾರೆ

ಸಪ್ತಾಹದ 3ನೇ ದಿನದಂದು ಸರಕಾರಿ ಪ್ರೌಢ ಶಾಲೆ ಕೊಕ್ಕಡದಲ್ಲಿ ಚೆಸ್ ಮತ್ತು ಕ್ಯಾರಂ ಆಟ ನಡೆಯಲಿದ್ದು ಬಳಿಕ ಆರೋಗ್ಯ ತಪಾಸಣೆ ಶಿಬಿರದಲ್ಲಿ ರಕ್ತದ ಮತ್ತು ಮಧುಮೇಹ ತಪಾಸನೆ ನಡೆಯಲಿದೆ. ಅದೇ ದಿನ ಕೊಕ್ಕಡ ಗ್ರಾಮ ಪಂಚಾಯತ್ನ ಸಹಕಾರದೊಂದಿಗೆ ಕೊಕ್ಕಡ ಸ್ವಚ್ಛ ಸಂಕೀರ್ಣಕ್ಕೆ ಭೇಟಿ ನೀಡಿ ಸ್ವಚ್ಛತಾ ಗ್ರಾಹಿಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.

ಸಪ್ತಾಹದ 4ನೇ ದಿನದಂದು ಶಿಬರಾಜೆ ಗ್ರಾಮಾಬ್ಯುಧಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ ವ್ಯವಹಾರ ದಿನದಡಿಯಲ್ಲಿ ವ್ಯವಹಾರ ನಾಮಫಲಕ -ವ್ಯವಹಾರ ತರಬೇತಿ ಕಾರ್ಯಕ್ರಮ ನಡೆಯಲಿದ್ದು

ಸಪ್ತಾಹದ 5ನೇ ದಿನದಂದು ಎಂಡೋ ಸಲ್ಫಾನ್ ಕೇಂದ್ರದಲ್ಲಿ ಹಣ್ಣು ಹಂಪಲು ವಿತರಣೆ ಮತ್ತು ಪೋಷಕರ ಭೇಟಿ ಮದ್ಯಾಹ್ನ ನಂತರ ಸರಕಾರಿ ಪ್ರೌಢ ಶಾಲೆ ಕೊಕ್ಕಡದಲ್ಲಿ ಮಕ್ಕಳಿಗೆ ಪೋಸ್ಟರ್ ಪ್ರೆಸೆಂಟೇಷನ್ ಸ್ಪರ್ಧೆ ನಡೆದು ಸಪ್ತಾಹದ 6ನೇ ದಿನ ಜೇ ಸಿ ಸೇರ್ಪಡೆ ಅಭಿಯಾನ ನಡೆಯಲಿದ್ದು.

ಸಪ್ತಾಹದ 7ನೇ ದಿನ ಕೊಕ್ಕಡ ಸಮ್ಯಕ್ ಕಾಂಪ್ಲೆಕ್ಸ್ ನಲ್ಲಿರುವ ಎಜುನೆಕ್ಸ್ಟ್ ಅಕಾಡೆಮಿಯ ಸಭಾಂಗಣದಲ್ಲಿ ಜೇಸಿ ಬಳಗದವರಿಗೆ ವಿವಿಧ ಸ್ಪರ್ಧೆಗಳು ನಡೆದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜೆಸಿ ವಲಯ ಸಂಯೋಜಕ ಜಿತೇಶ್ ಪಿರೇರಾ ಮತ್ತು ನಿವೃತ್ತ ಶಿಕ್ಷಕಿ ಜೇಸಿ ಮನೋರೋಮ ಭಾಗವಹಿಸಿ ಕಪಿಲಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು ಸಪ್ತಾಹದ ಆಯೋಜಕರು ಹಾಗೂ ಕೊಕ್ಕಡ ಜೇಸಿ ಕಪಿಲಾ ಘಟಕದ ಅಧ್ಯಕ್ಷೆ ಡಾ. ಶೋಭಾ ಪಿ. ಅತಿಥಿಗಳನ್ನು ಸ್ವಾಗತಿಸಿ, ಜೇಸಿ ಸಪ್ತಾಹದ ಚಾಲನ ದಿನದ ಕಾರ್ಯಕ್ರಮದಲ್ಲಿ ತಿಳಿಸಿದರು. ಸೆ. 9ರಿಂದ 15ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಜೇಸಿ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಜೈನ್ ವಲಂಬಳ, ಜೆಜೆಸಿ ಅಧ್ಯಕ್ಷ ಶ್ರವಣ್ ಜೆಸಿ ಎಲ್.ಟಿ. ದಕ್ಷ ಜೈನ್ ಉಪಸ್ಥಿತರಿದ್ದರು. ಜೆಸಿ ವಾಣಿಯನ್ನು ಪ್ರಿಯಾ ಜೆ. ಅಮೀನ್ ವಾಚಿಸಿ ಕಾರ್ಯದರ್ಶಿ ಚಂದನಾ ಪಿ. ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here