ಬೆಳ್ತಂಗಡಿ: ಹೋಲಿ ರೆಡಿಮರ್ ಚರ್ಚ್ ನಲ್ಲಿ ಸೆ.8ರಂದು ಕನ್ಯಾ ಮರಿಯಮ್ಮರವರ ಹುಟ್ಟು ಹಬ್ಬವಾದ ಮೊಂತಿ ಹಬ್ಬ(ತೆನೆ ಹಬ್ಬ)ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಘಂಟೆ 8:30ಕ್ಕೆ ಬೆಳ್ತಂಗಡಿ ಚರ್ಚ್ ಬಸ್ ಸ್ಟಾಂಡ್ ಸರ್ವಿಸ್ ರೋಡ್ ನಲ್ಲಿ ಹಿಮಾಲಯ ಚಿಕನ್ ಫಾರ್ಮ್ ಬಳಿ ಹಾಕಲಾದ ಭವ್ಯ ಮಂಟಪದಲ್ಲಿ ಕನ್ಯಾ ಮರಿಯಮ್ಮರವರ ಪ್ರಾರ್ಥನೆ ಹಾಗು ತೆನೆಯ ಆಶೀರ್ವಚನ ನಡೆಯಿತು.

ಚರ್ಚಿನ ಪ್ರದಾನ ಧರ್ಮ ಗುರು ಫಾ. ವಾಲ್ಟರ್ ಡಿಮೆಲ್ಲೋ, ಫಾ. ಕ್ಲಿಫರ್ಡ್ ಪಿಂಟೊ, ಅತಿಥಿ ಗುರು ಫಾ. ಕಿರಣ್ ಲೋಬೊ ಹಾಗೂ ಫಾ. ಆಲ್ವಿನ್ ಮಾಡ್ತಾ ಅವರು ಹಾಜರಿದ್ದರು. ಫಾ. ಕ್ಲಿಫರ್ಡ್ ಪಿಂಟೊ ಅವರು ಮೊಂತಿ ಹಬ್ಬದ ದಿನದ ಮಹತ್ವವನ್ನು ತಿಳಿಸಿದರು.
ಫಾ. ಕಿರಣ್ ಲೋಬೊ ಅವರು ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿ ಪ್ರಧಾನ ಗುರು ಫಾ. ವಾಲ್ಟರ್ ಡಿ’ಮೆಲ್ಲೊ ಪ್ರಾರ್ಥನೆ ನಡೆಸಿಕೊಟ್ಟರು. ತದ ನಂತರ ಭವ್ಯ ಮೆರವಣಿಗೆ ಚರ್ಚ್ ತನಕ ನಡೆಯಿತು. ಚರ್ಚ್ ನಲ್ಲಿ ಸಂಭ್ರಮದ ದಿವ್ಯ ಬಲಿ ಪೂಜೆ, ಹೊಸ ತೆನೆ ಚರ್ಚಿನ ಪ್ರತಿ ಕುಟುಂಬಕ್ಕೆ ವಾಳೆಯ ಗುರಿಕಾರರು ವಿತರಿಸಿದರು. ಕನ್ಯಾ ಮರಿಯಮ್ಮರಿಗೆ ಹೂಗಳನ್ನು ತಂದು ಅರ್ಪಿಸಿದ ಮಕ್ಕಳಿಗೆ ಕಬ್ಬು ಹಾಗು ಬಂದಂತಹ ಎಲ್ಲರಿಗೆ ಸಿಹಿಯನ್ನು ವಿತರಿಸಲಾಯಿತು. ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಪಾಲನ ಮಂಡಳಿಯ ಸದಸ್ಯರು ಹಾಗು 18 ವಾಳೆಯ ಗುರಿಕಾರರು ಸಹಕರಿಸಿದರು.