ಗುರುವಾಯನಕೆರೆಯಲ್ಲಿ ಗೀತೆ ಜತೆ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮ

0

ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಗೀತೆ ಜತೆ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮ ಸೆ. 7ರಂದು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ನಡೆಯಿತು. ಗೀತೆ ಜತೆ ಸಾಹಿತ್ಯ ಸಾಂಗತ್ಯ ಒಂದು ವರ್ಷದ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಹದಿಮೂರನೇ ಅಧ್ಯಾಯ ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗದ ಉಪನ್ಯಾಸವನ್ನು ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ಭಟ್ ಅಧ್ಯಕ್ಷರು ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಇವರು ನೀಡಿ ಭಗವದ್ಗೀತೆಯ 13ನೇ ಅಧ್ಯಾಯ ದೇಹ ಮತ್ತು ಆತ್ಮ ಇವುಗಳ ನಡುವಿನ ವ್ಯತ್ಯಾಸವನ್ನು ವಿವರಿಸುವ ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗದಲ್ಲಿ ಪ್ರಕೃತಿ, ಪುರುಷ, ಜ್ಞಾನ ಮತ್ತು ಜ್ಞೇಯ, ಜ್ಞಾನದ ಸ್ವರೂಪ, ಮೋಕ್ಷದ ಮಾರ್ಗ, ಆತ್ಮದ ಸ್ವರೂಪದ ಬಗ್ಗೆ ಶ್ರೀ ಕೃಷ್ಣ ಭಗವಂತ ಅರ್ಜುನನಿಗೆ ನೀಡಿದ ವಿವರಣೆಯನ್ನು ಸಾಹಿತ್ಯದ ಅನೇಕ ಉದಾಹರಣೆಗಳೊಂದಿಗೆ ಮನ ಮುಟ್ಟುವಂತೆ ವಿವರಿಸಿದರು.

ಪತ್ರಕರ್ತ ಮನೋಹರ ಬಳಂಜ ಅದ್ಯಕ್ಷತೆ ವಹಿಸಿ ಮಾತನಾಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ಆಯೋಜಿಸಿರುವ ಗೀತೆ ಜತೆ ಸಾಹಿತ್ಯ ಸಾಂಗತ್ಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ..ಇಂತಹ ಕಾರ್ಯಕ್ರಮಗಳ ಅಗತ್ಯತೆಯನ್ನು ತಿಳಿಸಿ, ಇದರ ಪ್ರಯೋಜನವನ್ನು ಯುವಜನರು ಪಡೆಯುವಂತಾಗಲಿ ಎಂದರು. ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಸುಭಾಷಿಣಿ ಕಾರ್ಯದರ್ಶಿ ಅ.ಭಾ.ಸಾ.ಪ. ಬೆಳ್ತಂಗಡಿ ತಾಲೂಕು ಸಮಿತಿ ಮತ್ತು ಸ್ವಸ್ತಿಕ ಕುಳಮರ್ಮ ಸಹಕರಿಸಿದರು. ವಸಂತಿ ಕುಳಮರ್ವ ಕಾರ್ಯಕ್ರಮವನ್ನು ನಿರೂಪಿಸಿ, ಡಾ. ಶ್ರೀಧರ ಭಟ್ ವಂದಿಸಿದರು.

LEAVE A REPLY

Please enter your comment!
Please enter your name here