ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಅವರ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿ ಇರುವ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸೆ.7ರಂದು ನಡೆಯಿತು.
ವರದಿ ಸಾಲಿನಲ್ಲಿ ಸಂಘದಲ್ಲಿ 1688 ಸದಸ್ಯರನ್ನು ಹೊಂದಿದ್ದು, 2,21,05,718 ಕೋಟಿ ಪಾಲು ಬಂಡವಾಳ ಸಂಗ್ರಹ ವಾಗಿರುತ್ತದೆ. 26,77,01,956 ಕೋಟಿ ಠೇವಣಿ ಸಂಗ್ರಹಿಸಿ ಒಟ್ಟು 26,20,6972 ಕೋಟಿ ಸದಸ್ಯರು ಸಾಲ ಪಡೆದುಕೊಂಡಿದ್ದಾರೆ.

ವರದಿ ಸಾಲಿನಲ್ಲಿ ಒಟ್ಟು 142.59 ಕೋಟಿ ವ್ಯವಹಾರ ನಡೆಸಿ ರೂ. 54,35,515ರಷ್ಟು ಲಾಭಗಳಿಸಿದೆ. ಸದಸ್ಯರಿಗೆ ಶೇ.10% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ಸಭೆಯಲ್ಲಿ ತಿಳಿಸಿದರು. ಸಂಘಕ್ಕೆ ನೂತನ ನಿವೇಶನ ಖರೀದಿಸಿ ಅದಕ್ಕೆ ಸಾಲ ಪಡೆದು ಕೊಂಡಿದೆ ಆ ಸಾಲದ ಉಳಿಕೆ ಮೊತ್ತಕ್ಕೆ ಸದಸ್ಯರ ಡಿವಿಡೆಂಡ್ ಮೊತ್ತ ನೀಡಬೇಕಾಗಿ ವಿನಂತಿಸಿದಾಗ ಸರ್ವ ಸದಸ್ಯರು ಇದಕ್ಕೆ ಒಪ್ಪಿಗೆ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ, ನಿರ್ದೇಶಕರಾದ ಕೆ. ಗಂಗಾದರ ಗೌಡ, ಎನ್. ಲಕ್ಷ್ಮಣ ಗೌಡ, ಬಾಲಕೃಷ್ಣ ಗೌಡ ಕೇರಿಮಾರು, ದಾಮೋದರ ಗೌಡ ಸುರುಳಿ, ಕೆ. ಜಯಂತ್ ಗೌಡ ಗುರಿಪಳ್ಳ, ಸುಂದರ ಗೌಡ ಫುಡ್ಕೆತ್ತು, ಬಿ.ಕೃಷ್ಣಪ್ಪ ಗೌಡ ಬೇಂಗಳ, ಧರ್ಮರಾಜ ಗೌಡ ಅಡ್ಕಡಿ, ಜಯಂತ್ ಗೌಡ ಓಣಿಯಾಲು, ಭರತ್ ಕುಮಾರ್ ಗೌಡ ಬಂಗಾಡಿ, ಕೆ. ಸಂಜೀವ ಗೌಡ ಪಾಂಚಜನ್ಯ, ಸರೋಜಿನಿ ವಿಜಯ, ಚೇತನಾ ಚಂದ್ರಶೇಖರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ವರದಿ ಮಂಡಿಸಿದರು. ಸಿಬ್ಬಂದಿಗಳಾದ ನಿತಿನ್ ಗೌಡ, ದೀಕ್ಷಿತ್ ಗೌಡ, ರೂಪಲತಾ ಗೌಡ, ಭವ್ಯ ಗೌಡ, ಶ್ರೀನಾಥ್ ಗೌಡ, ಸುಧಾಕರ ಗೌಡ, ಜಿತೇಶ್ ಗೌಡ, ಅಶ್ವಿತಾ, ನಿಕಿಲಾ, ಪುಣ್ಯ, ನಿತ್ಯ ನಿಧಿ ಸಂಗ್ರಹಕರು ವಸಂತ ಗೌಡ, ಮಧುಕರ ಗೌಡ, ಪರಮೇಶ್ವರ ಗೌಡ, ವಿನೋದ್ ಗೌಡ, ಲೀಲಾವತಿ ರಾಘವ ಗೌಡ, ಶಿವಾಜಿ ಗೌಡ, ಸುಜಯ್ ಗೌಡ, ಚಂದ್ರಾವತಿ, ಹೇಮಾವತಿ, ರಾಜೇಂದ್ರ ಗೌಡ, ಹರಿನಾಕ್ಷಿ ಸಹಕರಿಸಿದರು.
2024-25ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ ಯಲ್ಲಿ ಮತ್ತು ಪಿ ಯು ಸಿ ಯಲ್ಲಿ ಶೇ 85ಕಿಂತ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಧೈನಿಕ್ ಠೇವಣಿ ಸಂಗ್ರಹಕರಿಗೆ ಸನ್ಮಾನಿಸಲಾಯಿತು.
2025-2026ನೇ ಸಾಲಿನ ಯೋಜಿತ ಕಾರ್ಯಕ್ರಮಗಳು
ಸಹಕಾರಿಯ ವಾರ್ಷಿಕ ವ್ಯವಹಾರವನ್ನು 142 ಕೋಟಿಯಿಂದ 175 ಕೋಟಿಗೆ ಹೆಚ್ಚಿಸುವುದು, ಪಾಲು ಬಂಡವಾಳದ (ಷೇರು ಸಂಗ್ರಹಣೆಯ) ಮೊತ್ತವನ್ನು 2.50 ಕೋಟಿಗೆ ಏರಿಸುವುದು,
ನಮ್ಮ ಸಮಾಜ ಬಾಂಧವರನ್ನು ಮತ್ತು ಇತರರನ್ನು ಸೇರಿಸಿಕೊಂಡು ಹೊಸದಾಗಿ ಸ್ವಸಹಾಯ ಇನ್ನು ಹೆಚ್ಚು ಗುಂಪುಗಳನ್ನು ರಚಿಸುವುದು, ನಮ್ಮ ಸಮಾಜದ ಸದಸ್ಯತನಕ್ಕೆ ಅರ್ಹರಿರುವ ಎಲ್ಲಾ ಸದಸ್ಯರನ್ನು ಸದಸ್ಯರಾಗುವಂತೆ ಪ್ರೇರೇಪಿಸುವುದು, ಸಹಕಾರಿಯ ಠೇವಣಿಯನ್ನು 37 ಕೋಟಿಗೆ ಏರಿಸುವುದು.
2024-2025ನೇ ಸಾಲಿನಲ್ಲಿ ರೂ.35 ಕೋಟಿ ಸಾಲ ನೀಡುವುದು,
ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಮತ್ತು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಸಹಯೋಗದೊಂದಿಗೆ ಅನುಗ್ರಹ ಶಾಲೆಯ ಎದುರು ಬದಿಯ ಎಕ್ರೆ ಜಾಗದಲ್ಲಿ ಒಕ್ಕಲಿಗರ ಭವನ, ವಾಣಿಜ್ಯ ಸಂಕೀರ್ಣ ಕಟ್ಟಡಗಳು ಮತ್ತು ಸೌಹಾರ್ಧ ಸಹಕಾರಿಯ ಮುಖ್ಯ ಕಛೇರಿ ನಿರ್ಮಿಸುವುದು.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ ನಗರ ಪ್ರದೇಶದಲ್ಲಿ, ವೇಣೂರು, ಗೇರುಕಟ್ಟೆ ಮತ್ತು ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಶಾಖೆಯನ್ನು ತೆರೆಯುವರೇ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇವರ ಅನುಮತಿಯನ್ನು ಪಡೆದುಕೊಂಡು ಶಾಖೆಯನ್ನು ಪ್ರಾರಂಭಿಸುವ ಯೋಜನೆ ರೂಪಿಸಲಾಗಿದೆ.
ಉಪಾಧ್ಯಕ್ಷ ಶಿವಕಾಂತ ಗೌಡ ಸ್ವಾಗತಿಸಿದರು. ವ್ಯವಸ್ಥಾಪಕ ನಿತಿನ್ ಗೌಡ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಾಮೋದರ ಗೌಡ ವಂದಿಸಿದರು.