ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

0

ನೆರಿಯ: ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಸೆ. 5ರಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಾಂಪ್ರದಾಯಿಕವಾಗಿ ಪೂಕಳಂ ಹಾಕಲಾಯಿತು. ಸಂಸ್ಥೆಯ ಟ್ರಸ್ಟೀ ಸದಸ್ಯೆ ಮೇರಿ ಯು.ಪಿ. ಪುಣಾಣಿಗಳೊಂದಿಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಮ್ಯಾನೇಜಿಂಗ್ ಟ್ರಸ್ಟೀ ಡಾ.ಯು.ಸಿ.ಪೌಲೋಸ್ ರವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಈ ಹಬ್ಬಕ್ಕೆ ಸಿಯೋನ್ ಸಂಸ್ಥೆಯ ಆಡಳಿತ ವರ್ಗದವರು, ಕುಟುಂಬಸ್ಥರು, ಹಿತೈಷಿಗಳು, ಸಿಬ್ಬಂದಿವರ್ಗದವರು ಆಶ್ರಮನಿವಾಸಿಗಳು ಉಪಸ್ಥಿತರಿದ್ದರು. ಸಾಂತ್ವನಂ ಕುವೈಟ್ ಇವರಿಂದ ಓಣಂ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here