ಕನ್ಯಾಡಿ: ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಮನೋರಂಜನಾ ಕಾರ್ಯಕ್ರಮದ ಉದ್ಘಾಟನ ಸಮಾರಂಭವು ಸೆ.5ರಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಯಿತು.
ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಮತ್ತು ಪ್ರಗತಿಪರ ಕೃಷಿಕ ಮಾರ್ಷಲ್ ವೇಗಸ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕೊಕ್ಕಡದಲ್ಲಿರುವ ಪುನಶ್ಚೇತನ ಕೇಂದ್ರ ರಾಜ್ಯಕ್ಕೇ ಮಾದರಿಯಾಗಿದೆ. ಸಂಸ್ಥೆಯ ಸೇವಾಕಾರ್ಯಗಳ ನಿರಂತರತೆ ಮತ್ತು ಪಾರದರ್ಶಕತೆಯನ್ನು ಶ್ಲಾಘಿಸಿದರು.
ಡಾ. ವೈಶಾಖ್ ಬಿ. ಭಟ್ ರವರು ಆರೋಗ್ಯ ಸೇವೆಯಲ್ಲಿ ಮಾಡಿದಂತಹ ಸೇವಾಕಾರ್ಯಗಳನ್ನು ಗುರುತಿಸಿ, ಸೇವಾಭಾರತಿ ಸಂಸ್ಥೆಯ ವತಿಯಿಂದ “ಸೇವಾ ಶ್ರೇಷ್ಠ -2025” ಗೌರವವನ್ನು ನೀಡಿ ಸನ್ಮಾನಿಸಲಾಯಿತು.
ಬೆನ್ನುಹುರಿ ಅಪಘಾತಕ್ಕೊಳಗಾಗಿರುವ ಭವಾನಿ ಶಂಕರ್ ರವರು ಹತ್ತಿಯಿಂದ ಬತ್ತಿ ಮಾಡುವ ಯಂತ್ರದ ಮೂಲಕ ಸ್ವ- ಉದ್ಯೋಗವನ್ನು ಮಾಡಲು ಮುಂದಾಗಿದ್ದು ಇವರಿಗೆ ಸಂಸ್ಥೆಯ ಪರವಾಗಿ ಯಂತ್ರವನ್ನು ಹಸ್ತಾಂತರಿಸಲಾಯಿತು. ಮತ್ತು ಮಂಗಳೂರು KMC ಆಸ್ಪತ್ರೆಯ ಸ್ಪೈನ್ ಶಸ್ತ್ರಚಿಕಿತ್ಸಕ ಡಾ. ವೈಶಾಕ್ ಬಿ ಭಟ್ ರವರಿಂದ ಫಲಾನುಭವಿಗಳಿಗೆ ವೈದ್ಯರ ಸಮಲೋಚನೆಯನ್ನು ಮಾಡಿ ಫಲಾನುಭವಿಗಳಿಗೆ ಮನೋರಂಜನಾ ಕಾರ್ಯಕ್ರಮವನ್ನು ನಡೆಸಲಾಯಿತು.
Dattopant Tengadi Central board for Workers education and development RAC ಮೆಂಬರ್ ಹಾಗೂ ನವಮಂಗಳೂರು ಬಂದರು ಮತ್ತು ಜನರಲ್ ನೌಕರರ ಅಸೋಸಿಯೇಷನ್ BMS ನ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ನಾಯ್ಕ್, ಬೆಳ್ತಂಗಡಿ ಫಾರ್ಮರ್ ಪ್ರೆಸಿಡೆಂಟ್ ಎಕ್ಸ್ ಸರ್ವಿಸ್ ಮೆನ್ಸ್ ಅಸೋಸಿಯೇಷನ್ ಮತ್ತು ಪ್ರಧಾನರು ಹಿಡಿ ಅಕ್ಕಿ ಯೋಜನೆ ಉಜಿರೆ, ಹವ್ಯಕ ವಲಯ ಶ್ರೀ ರಾಮಚಂದ್ರಪುರ ಮಠದ ಎಸ್. ಕೃಷ್ಣ ಭಟ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್, ದಿವ್ಯಂಗಾರ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಅಂಜನಾ ದೇವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಭಾರತಿ ಟ್ರಸ್ಟಿ ಜಯರಾಜ್ ಸಾಲಿಯನ್ ಕಾನರ್ಪ ಸ್ವಾಗತಿಸಿ, ಪೀರ್ ಟ್ರೈನರ್ ಅಂತೋಣಿ ಮತ್ತು ಡಾಕ್ಯುಮೆಂಟೇಶನ್ ಮೋಾನಿಟರಿಂಗ್ ಅಂಡ್ ಇವ್ಯಾಲುಯೇಶನ್ ಕಾರ್ಡಿನೇಟರ್ ಸುಮ ಕಾರ್ಯಕ್ರಮವನ್ನು ನಿರೂಪಿಸಿ, ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಮೋಹನ್ ಎಸ್ ಧನ್ಯವಾದವಿತ್ತರು.