ನೆರಿಯ: ಗ್ರಾಮದ ಅಣಿಯೂರು ಬಿರ್ಮಲರ್ ನಿವಾಸಿ ಬಿ.ಜೆ.ಪಿ ಹಿರಿಯ ಕಾರ್ಯಕರ್ತ ದಿ. ರವೀಂದ್ರನಾಥ್ ಅವರ ತಾಯಿ ಚಿನ್ನಮ್ಮ (90) ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.
ಮೃತರು ಮಕ್ಕಳಾದ ಶಿವಪ್ರಸಾದ್, ವಿನಯಲತಾ, ಪ್ರೇಮ, ಬೇಬಿ ಮತ್ತು ಸಾವಿತ್ರಿ, ಸೊಸೆ ಬಿಜೆಪಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ಮಾಜಿ ಸದಸ್ಯೆ ಸುಲೋಚನಾ ಹಾಗೂ ಲತಾಶ್ರೀ, ಮೊಮಕ್ಕಳಾದ ಅಕ್ಷಯ್, ಅಂಜನಾ, ಧೃತಿ, ಧಾತ್ರಿ ಅವರನ್ನು ಅಗಲಿದ್ದಾರೆ.