ಕಕ್ಕಿಂಜೆ: ನಿವಾಸಿ ಎ.ಕೆ.ಮುಹಮ್ಮದ್ ಹಾಜಿ (ಆಡ್ಡೂರು ಹಾಜಿ) ಅವರು ಸೆ.6ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಮುಹ್ಯಿಯ್ಯದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಹಯಾತ್ತುಲ್ ಇಸ್ಲಾಂ ಮದ್ರಸ ಬೀಟಿಗೆ ಇದರ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಮಕ್ಕಳಾದ ಅಕ್ಬರ್ ಎ.ಕೆ., ಹಸನ್ ಬಾವ ಎ.ಕೆ., ಮೊಯ್ದೀನ್ ಎ.ಕೆ., ಹಂಝಾ ಎ.ಕೆ. ಮತ್ತು ಝುಬೈರ್ ಎ.ಕೆ. ಅವರನ್ನು ಅಗಲಿದ್ದಾರೆ.