ಬೆಳ್ತಂಗಡಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಸುರತ್ಕಲ್‌ನ ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸುರತ್ಕಲ್‌ನಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಆಳ್ವಾಸ್ ಪ.ಪೂ ಕಾಲೇಜು 8 ಚಿನ್ನ ಹಾಗೂ 3 ಬೆಳ್ಳಿಯೊಂದಿಗೆ ಒಟ್ಟು 11 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲೂ ಆಳ್ವಾಸ್ 6 ಚಿನ್ನ ಹಾಗೂ 3 ಕಂಚಿನೊAದಿಗೆ ಒಟ್ಟು 9 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡು ಅವಳಿ ಪ್ರಶಸ್ತಿಗೆ ಭಾಜನವಾಯಿತು.
ಹುಡುಗರ ವಿಭಾಗದಲ್ಲಿ ಆಳ್ವಾಸ್ ಸಾಧನೆ : 61 ಕೆಜಿ – ಅರುಣ್ (ಪ್ರಥಮ), 65 ಕೆಜಿ – ಶಶಿಕುಮಾರ್ (ಪ್ರಥಮ), ರಂಜನ್ (ದ್ವಿತೀಯ), 70 ಕೆಜಿ – ಮನೋಜ್ (ಪ್ರಥಮ), 74 ಕೆಜಿ – ಶಿವರಾಜ್ ಕುಮಾರ್ (ಪ್ರಥಮ), ರಜತ್ ಬಾಸು (ದ್ವಿತೀಯ), 79 ಕೆಜಿ – ಸಂಕೇತ್ (ಪ್ರಥಮ), 86 ಕೆಜಿ – ಕುಶಾಲ್ (ಪ್ರಥಮ), 92 ಕೆಜಿ – ಶಮಂತ್ ಶೆಟ್ಟಿ (ಪ್ರಥಮ), ಜೇಷ್ಠ ಗೌಡ (ದ್ವಿತೀಯ), 97+ ಕೆಜಿ – ಗಣೇಶ್ ಯು (ಪ್ರಥಮ) ಸ್ಥಾನ ಪಡೆದರು.
ಹುಡುಗಿಯರ ವಿಭಾಗದಲ್ಲಿ ಆಳ್ವಾಸ್ ಸಾಧನೆ : 50 ಕೆಜಿ – ಕಾವ್ಯ ಎನ್ (ತೃತೀಯ), 53 ಕೆಜಿ – ಗಂಗಮ್ಮ (ತೃತೀಯ), 55 ಕೆಜಿ – ಗಂಗಮ್ಮ ಅವ್ವನವ್ವರ್ (ತೃತೀಯ), 59 ಕೆಜಿ – ಸ್ಪೂರ್ತಿ (ಪ್ರಥಮ), 62 ಕೆಜಿ – ಊರ್ಮಿಳಾ (ಪ್ರಥಮ), 65 ಕೆಜಿ – ಸೌಮ್ಯ (ಪ್ರಥಮ), 68 ಕೆಜಿ – ಚೈತಿಕಾ ಎನ್ ಎಸ್ (ಪ್ರಥಮ), 72 ಕೆಜಿ – ಜಾಹ್ನವಿ ಕುರಗೋಡು (ಪ್ರಥಮ), 76 ಕೆಜಿ – ನವ್ಯಶ್ರೀ (ಪ್ರಥಮ) ಸ್ಥಾನ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.