ಬೆಳ್ತಂಗಡಿ: ತಾಲೂಕಿನ ಲಾಯಿಲ-ನಡ ಗ್ರಾಮದ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವದಲ್ಲಿ ಹೇಮಂತ್ ಕುಮಾರ್ ಕೆದ್ದೇಲು ಅವರ ಸಾರಥ್ಯದಲ್ಲಿ ಪಿಲಿನಲಿಕೆ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ 5ನೇ ವರ್ಷದ ಪಿಲಿ ನಲಿಕೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ಚಂದ್ಕೂರು ದೇವಸ್ಥಾನದಲ್ಲಿ ನೆರವೇರಿತು.
ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮುಖ್ಯಸ್ಥ ಧನಂಜಯ ಅಜ್ರಿಯವರು ನೆರವೇರಿಸಿದರು. ಜೊತೆಗೆ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹಾಗೂ ಶಿವದುರ್ಗ ಟೈಗರ್ಸ್ ಇದರ ಸಲಹೆಗಾರರಾದ ಅಲೋಕ್ ಅಜ್ರಿ, ಅರವಿಂದ್ ಲಾಯಿಲ, ವ್ಯವಸ್ಥಾಪಕ ಹೇಮಂತ್ ಕೇದ್ದೆಲು, ಸ್ಥಳೀಯರಾದ ಚಂದ್ರಿಕಾ ಹೊಳ್ಳ ಹಾಗೂ ಶಿವದುರ್ಗ ಟೈಗರ್ಸ್ ನ ಸದಸ್ಯರು ಉಪಸ್ಥಿತರಿದ್ದರು.
ಪಿಲಿ ನಲಿಕೆ ಕಾರ್ಯಕ್ರಮ ಅ.1ರಂದು ಸಂಜೆ 7ರಿಂದ ನಡೆಯಲಿದ್ದು, ಊದು ಪೂಜೆ ಸೆ. 30ರಂದು ನಡೆಯಲಿದೆ ಎಂದು ಶಿವದುರ್ಗ ಟೈಗರ್ಸ್ ತಂಡ ತಿಳಿಸಿದೆ.