ಬೆಳ್ತಂಗಡಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ನೆನಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯು ಶಾಸಕ ಹರೀಶ್ ಪೂಂಜಾ ಅವರ ಅಧ್ಯಕ್ಷತೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸೆ.5ರಂದು ನಡೆಯಿತು. ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಅವರು ಡಾ. ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ತಿದ್ದಿ ತೀಡಿ ಸಮಾಜಕ್ಕೆ ವಿವಿಧ ಆಯಾಮಗಳಲ್ಲಿ ಉತ್ತುಂಗ ಮಟ್ಟದ ಕೊಡುಗೆ ನೀಡುವವರು ಶಿಕ್ಷಕರು. ಶಿಕ್ಷಣ ಇಲಾಖೆಯಲ್ಲಿ ಭಡ್ತಿ ಅಥವಾ ಪ್ರಶಸ್ತಿ ನೀಡುವ ವಿಚಾರ ಶಿಕ್ಷಕರ ಗುಣಮಟ್ಟದ ಮೇಲೆ ಆಧಾರಿತವಾಗಿದೆ. ಶಿಕ್ಷಕರ ಕೆಲಸದ ವೈಖರಿಯಲ್ಲಿ ಅನಗತ್ಯ ಅಧಿಕಾರಿಗಳ ಹಸ್ತಕ್ಷೇಪ ಕಡಿಮೆಯಾಗಬೇಕಿದೆ. ಪ್ರಾಥಮಿಕ ಶಾಲೆಯಿಂದ ಪದವಿ ಕಾಲೇಜಿನ ಶಿಕ್ಷಕರಿಗೆ ಸರಿಯಾದ ಸಮಯದಲ್ಲಿ ವೇತನ ಪಾವತಿಯಾಗುವಲ್ಲಿ ಸರಕಾರ ಗಮನ ಹರಿಸಬೇಕು.ಸರಕಾರಿ ಶಾಲೆಗಳನ್ನು ಮೊದಲು ಸರಿಯಾಗಿ ಉಳಿಸಿ ಬೆಳೆಸಲೇಬೇಕು. ಶಿಕ್ಷಕರೇ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು ಶಿಕ್ಷಕರಿಗೆ ಸರಿಯಾದ ಸೌಲಭ್ಯ ಒದಗಿಸಲೇಬೇಕು. ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರು ಸಫಲರಾಗಿದ್ದಾರೆ ಎಂದು ಹೇಳಿ ಶಿಕ್ಷಕರ ಕ್ಷೇತ್ರದಲ್ಲಿ ಗಣನೀಯ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ, ಅವಿರತ ಶ್ರಮದಿಂದ ಆಯ್ಕೆಯಾದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ: 2025-26ನೇ ಸಾಲಿನಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಾಲಿನಿ ಎಚ್.ಕೆ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಂಡೇಶ್ವರ, ವೀಣಾ ಮೇರಿ ರೇಗೊ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪ್ಲಬೆಟ್ಟು ಮಂಗಳೂರು, ಉಷಾಲತಾ ಹೆಗ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡ್ಯೋಡಿ ಮಾರ್ಪಾಡಿ ಮೂಡುಬಿದಿರೆ, ಶಾಂತಿ ಲೀನಾ ಮುಖ್ಯ ಶಿಕ್ಷಕಿ ಕಿರಿಯ ಪ್ರಾಥಮಿಕ ಶಾಲೆ ದೇವಸ್ಯ, ಪಡೂರು ಬಂಟ್ವಾಳ, ಜಯಾ ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸುರ್ಯ ಬೆಳ್ತಂಗಡಿ, ಜಗನ್ನಾಥ ಕೆ. ಅಮೈ ಕಿರಿಯ ಪ್ರಾಥಮಿಕ ಶಾಲೆ ಅರೆಡಿ ಪುತ್ತೂರು, ಲಲಿತಾ ಕುಮಾರಿ ಎಸ್. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿ, ಸುಳ್ಯ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಜಯಲಕ್ಷ್ಮಿ ದೈಹಿಕ ಶಿಕ್ಷಕಿ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಕಂಪಾಡಿ, ಮೀನಕಳಿಯ ಚಂದ್ರಶೇಖರ ಸಿ.ಎಚ್. ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಚ್ಚಿಲಗುಡ್ಡ ಸೋಮೇಶ್ವರ ಮಂಗಳೂರು ದಕ್ಷಿಣ, ಹರೀಶ ಕೆ.ಎಂ. ಮುಖ್ಯ ಶಿಕ್ಷಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡುಬಿದಿರೆ, ಬಾಬು ನಾಯ್ಕಬಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ ಕೇವು ಬಂಟ್ವಾಳ, ಆರತಿ ಕುಮಾರಿ ದೈಹಿಕ ಶಿಕ್ಷಣ ಶಿಕ್ಷಕಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ನಿಟ್ಟಡೆ ಬೆಳ್ತಂಗಡಿ, ತಾರಾನಾಥ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಶಾಂತಿಗೋಡು ಪುತ್ತೂರು, ಶ್ರೀಧರ ಗೌಡ ಸ.ಹಿ.ಪ್ರಾ. ಶಾಲೆ ದೇವಚಳ್ಳ ಸುಳ್ಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಿಲ್ಮಾ ಪಿ. ಲೋಬೊ ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆ ಮಂಗಳೂರು, ದುರ್ಗಾಲತಾ ಸಹ ಶಿಕ್ಷಕಿ, ಸರಕಾರಿ ಪ್ರೌಢಶಾಲೆ ಪೆರ್ಮನ್ನೂರು ಮಂಗಳೂರು ದಕ್ಷಿಣ, ರತ್ನಾವತಿ ಆಚಾರ್ ಕೆ. ಸಹಶಿಕ್ಷಕಿ ಸರಕಾರಿ ಪ್ರೌಢಶಾಲೆ ಪ್ರಾಂತ್ಯ ಮೂಡುಬಿದಿರೆ, ಆದಂ,ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಸರಪಾಡಿ ಬಂಟ್ವಾಳ, ವಿಜಯ ಕುಮಾರ್ ಎಂ. ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಬೆಳ್ತಂಗಡಿ, ಮೋಹನ ಎ. ಚಿತ್ರಕಲಾ ಶಿಕ್ಷಕ, ಸರಕಾರಿ ಪ್ರೌಢಶಾಲೆ ಎಣ್ಣೂರು ಸುಳ್ಯ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳ್ತಂಗಡಿ ತಾಲೂಕಿನ ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಕೇತರ ನೌಕರರಾದ ರಾಜಶ್ರೀ, ಸಹಶಿಕ್ಷಕರು, ಎಸ್.ಡಿ.ಎಂ ಪ್ರೌಢಶಾಲೆ ಬೆಳಾಲು, ಲಿಲ್ಲಿ ಪಾಯ್ಸ್ ಮುಖ್ಯ ಶಿಕ್ಷಕರು ನಾರಾವಿ ಪ್ರೌಢ ಶಾಲೆ, ತ್ರಿವೇಣಿ ಬಿ. ಸಹಶಿಕ್ಷಕರು ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ, ಅಲೆಕ್ಸಾಂಡರ್ ಓ.ಜೆ., ದೈಹಿಕ ಶಿಕ್ಷಣ ಶಿಕ್ಷಕರು ಸಂತ ತೋಮಸ್ ಅ. ಪ್ರೌ. ಶಾಲೆ ಗಂಡಿಬಾಗಿಲು ನೆರಿಯ, ಫೆಲ್ಸಿ ಫಾತಿಮಾ ಮೊರಾಸ್ ಮುಖ್ಯ ಶಿಕ್ಷಕರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ತಣ್ಣೀರುಪಂತ, ಕೃಷ್ಣಪ್ಪ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶಿಪಟ್ಟ, ಶಿವಶಂಕರ ಭಟ್ ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಅಂಡಿಂಜೆ, ಸುರೇಶ್ ಆಚಾರ್ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಂಪದ, ಮನೋರಮ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಕ್ಕಡ, ಪಂಚಾಕ್ಷರಪ್ಪ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು, ರೇವತಿ ಎಚ್. ಡಿ. ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂಗಾಡಿ, ಶ್ಜೆಸಿಂತಾ ಬ್ರಾಗ್ ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಉಂಬೆಟ್ಟು, ಸುಂದರಿ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಂಡೂರು, ಉಷಾ ಕುಮಾರಿ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೂಡುಜಾಲು, ನೇತ್ರಾವತಿ ಜಿ ಸಹಶಿಕ್ಷಕರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ತುರ್ಕಳಿಕೆ, ರೆನಿಲ್ಲಾ ಜೋಯ್ಸ್ ಮಥಾಯಸ್ ಸಹಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಂಜ, ಶಂಕರ್ ತಾಮನ್ಮರ್ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧಬೈಲು ಪರಾರಿ, ವಿದ್ಯಾಕುಮಾರಿ ಪಿ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಂಡಿಬಾಗಿಲು, ಸರೋಜಾ ಸಹಶಿಕ್ಷಕರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಡಗಕಾರಂದೂರು, ಗ್ರೆಟ್ಟ ಮರಿಯ ಡಿಮೆಲ್ಲೋ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಂಜ, ನಿರ್ಮಲ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದೊಂಪದ ಪ, ಮೋಂತಿ ಡಿಸೋಜಾ ಸಹಶಿಕ್ಷಕರು ಸರಕಾರಿ ಕಿರಿಯ ಪ್ರಾಥಮಿಕ ಉಣ್ಣಾಲು, ರೆಜಿನಾ ಡಿಸಿಲ್ವಾ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯರು ದೇವಸ್ಥಾನ, ಶಾಲಿನಿ ಪಿ. ಕೆ ಸಹಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ, ಸರೋಜ ಯು ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಇಳಂತಿಲ, ಸಿದ್ದಪ್ಪ ಮೆಟಗಾರ ಸಹಶಿಕ್ಷಕರು ಚರ್ಚ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ, ಸೀತಾರಾಮ ಗೌಡ ಕೆ ದೈಹಿಕ ಶಿಕ್ಷಣ ಶಿಕ್ಷಕರು ಗೋಪಾಲಕೃಷ್ಣ ಅ. ಹಿ. ಪ್ರಾ. ಶಾಲೆ ಅರಸಿನಮಕ್ಕಿ, ನಿಂಗಪ್ಪ ಸಹ ಶಿಕ್ಷಕರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಾರು ಹಾಗೂ ಕೆ. ಪಿ. ಎಸ್. ಪುಂಜಾಲಕಟ್ಟೆಯ ಪ್ರಥಮ ದರ್ಜೆ ಸಹಾಯಕ ಪ್ರವೀಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

2024ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಗುರುವಾಯನಕೆರೆ ಸರಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ್ ಕೆ.ವಿಟ್ಲ ಹಾಗೂ ಮೂಡಬಿದ್ರೆ ನಿರ್ಕರೆ ಹಿ.ಪ್ರಾ.
ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ಕೆ.,ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಡ ಪ್ರೌಢ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಮೋಹನ್ ಬಾಬು, ಸವಣಾಲು ಅನುದಾನಿತ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಜಿ. ಹಾಗೂ ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ. ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಪಿಯು ಕಾಲೇಜು ವಿಭಾಗದ ಉಪನಿರ್ದೇಶಕಿ ರಾಜೇಶ್ವರಿ, ಪಿಯು ಕಾಲೇಜು ಪ್ರಾಂಶುಪಾಲ ವಿಭಾಗದ ಅಧ್ಯಕ್ಷ ಜಯಾನಂದ ಸುವರ್ಣ, ಜ್ಞಾನೇಶ್, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧೀಕ್ಷಕ ಭುವನೇಶ್, ಶಿಕ್ಷಣ ಇಲಾಖೆಯ ಮನೋರಮೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸದಾನಂದ ಪೂಂಜಾ, ಮಹಮ್ಮದ್ ರಿಯಾಜ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಗುರುಪ್ರಸಾದ್, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಶಿಕ್ಷಣ ಇಲಾಖೆಯ ವಿಮಲ್ ನೆಲ್ಯಾಡಿ, ಬಸವಲಿಂಗಪ್ಪ, ಲಿಲ್ಲಿ ಪಾಯಸ್, ನಿಂಗರಾಜು, ಬಾಲಕೃಷ್ಣ, ನಾಗರಾಜ್, ಮಾರ್ಕ್, ಸುಜಯಾ, ರವಿರಾಜ್, ಕರುಣಾಕರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ತಾಲೂಕಿನ ಶಿಕ್ಷಣ ಸಂಘಗಳ ಪದಾಧಿಕಾರಿಗಳು, ಶಿಕ್ಷಕ ರಕ್ಷಕ ಸಂಘದವರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಅನುಸೂಯ ಪಾಟಕ್ ಮತ್ತು ಬಳಗದವರು ನಾಡಗೀತೆ ಹಾಡಿದರು. ಕಳೆದ ಒಂದು ವರ್ಷದಲ್ಲಿ ವೃತ್ತಿಯಲ್ಲಿದ್ದುಕೊಂಡು ಅಗಲಿದ ಜಿಲ್ಲೆಯ ಶಿಕ್ಷಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ದ.ಕ ಜಿಲ್ಲಾ ಶಿಕ್ಷಕರ ದಿನಾಚರಣಾ ಸಮಿತಿಯ ನೋಡೆಲ್ ಅಧಿಕಾರಿ ಲಕ್ಷ್ಮೀನಾರಾಯಣ ಅವರು ಡಿ ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಸ್.ಶಶಿಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು, ಸಂಘಟಕರನ್ನು ಹಾಗೂ ಜಿಲ್ಲೆಯ ವಿವಿಧ ಶಿಕ್ಷಕರ ಸಂಘಟನೆಗಳ ಅಧ್ಯಕ್ಷರುಗಳನ್ನು ಸ್ವಾಗತಿಸಿದರು. ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಧನ್ಯವಾದ ಸಮರ್ಪಿಸಿದರು.