ವೇಣೂರು: ಮಂಗಳೂರು ಸಂತ ಆಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದ ಚೆಮರ್ಜೆರ್ಸಿ 2025 ಅಂತರ್ ಪಿ. ಯು. ಕಾಲೇಜು ಕೆಮಿಸ್ಟ್ರಿ ಫೆಸ್ಟ್ ನಲ್ಲಿ ಕೆಮಿಸ್ಟ್ರಿ ಐಸ್ಬ್ರೇಕಿಂಗ್ ಸ್ಪರ್ಧೆಯಲ್ಲಿ ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ನಿಧಿ, ತೇಜಸ್ವಿ, ದೃತಿ, ಮನ್ವಿತ್, ನಿತೇಶ್, ಪ್ರಮುಖ್ ಜೈನ್, ಸಂಪತ್, ಡೆನಿಲ್, ಸಿನೋಬಿಯಸ್ ಬಿಜು, ಶಾನ್ವಿ, ರಮ್ಯ, ರಕ್ಷಿತಾ, ಪೃಥ್ವಿ, ವೀಕ್ಷಾ, ಪ್ರಣಮ್ಯ, ದೀಕ್ಷಾ, ರುತ್ವಿ, ರಕ್ಷವಿ, ಶ್ರೇಯಸ್, ರಿಖಿಲ್ ರಾಜ್ , ಅವಿನಾಶ್, ಹಲಿಮಾ ಜುಲ್ಪಾ ಭಾಗವಹಿಸಿದರು.
Chemistry ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಸಿನೋಬಿಯಸ್ ಬಿಜು ಪ್ರಥಮ ಸ್ಥಾನ ಪಡೆದಿರುತ್ತಾರೆ.