


ಸೌತಡ್ಕ: ಬೆಂಗಳೂರು ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿಯ ಸಹಕಾರದೊಂದಿಗೆ ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ ಬೆನ್ನುಹುರಿ ಅಪಘಾತಕ್ಕೊಳಗಾದ ಶಿಬಾಜೆಯ ಮೋಹನ್ ಪಿ.ಬಿ., ಮಹೇಶ್ ಗುತ್ತಿಗಾರು, ನಿಡ್ಲೆ ಚಂದ್ರಶೇಖರ್ ಭಟ್, ಪುತ್ತೂರು ಜೈನಾಬಿ, ಬದಿಯಡ್ಕ ಚಂದ್ರಶೇಖರ್, ಕಡಬ ಧನಂಜಯ ಮತ್ತು ಯೋಗೀಶ್ ಎರ್ಮಲ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಅ. 20 ದೀಪಾವಳಿ ಹಬ್ಬದಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ರೂಪಲೇಖ ಅವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು. ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಆರೈಕೆದಾರರು, ಫಲಾನುಭವಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










