ಬೆಳ್ತಂಗಡಿ: ಅಡಿಕೆ ವರ್ತಕರ ಜಿಲ್ಲಾ ಸಂಘಟನೆಯ ಮೊಟ್ಟ ಮೊದಲ ಪದಾಧಿಕಾರಿಗಳ ಆಯ್ಕೆ ಸಭೆಯು ಬಿ.ಸಿ.ರೋಡ್‌ನ ರಂಗೋಲಿ ಭವನದಲ್ಲಿ ಸೆ.2ರಂದು ನಡೆದಿದ್ದು, ನೂತನ ಅಧ್ಯಕ್ಷರಾಗಿ ಮಡಂತ್ಯಾರಿನ ಶ್ರೀದೇವಿ ಸುಪಾರಿ ಟ್ರೇಡರ್ಸ್ ಇದರ ಮಾಲಕ ಪ್ರಶಾಂತ್ ಶೆಟ್ಟಿ ದೂಡಾಯರು ಆಯ್ಕೆಯಾದರು.

ಕಾರ್ಯದರ್ಶಿಯಾಗಿ ತೇಜಸ್ವಿ ರಾಜ್, ಕೋಶಾಧಿಕಾರಿಯಾಗಿ ಸಲೀಂ, ಉಪಾಧ್ಯಕ್ಷರಾಗಿ ಜಲೇಶ್ ಜೀವನಿ ನಿಲಾಬ್, ಭವಿನ್ ಕಮಣಿ, ಜೊತೆ ಕಾರ್ಯದರ್ಶಿಯಾಗಿ ಸುದೀಪ್ ಶೆಟ್ಟಿ ಮೊಡಯೂರು, ಧರ್ನಪ್ಪ ಅಂಬಲ, ಜಿಲ್ಲೆಯ ವಿವಿಧ ತಾಲೂಕಿನಿಂದ ಹಾಗೂ 32 ಮಂದಿ ನಿರ್ದೇಶಕರಿಗಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಶಾಂತ್ ಶೆಟ್ಟಿ ಮಡಯೂರು ಮಾತನಾಡಿ ಜಿಲ್ಲೆಯಲ್ಲಿ ಅಡಿಕೆ ವರ್ತಕರು ಎದುರಿಸುತ್ತಿರುವ ಸಮಸ್ಯೆ ಕುರಿತು ಸಂಘಟಕರಾಗಿ ಅಡಿಕೆ ವರ್ತಕರು ಹಿತಾಸಕ್ತಿ ಕಾಪಾಡುವ ಕೆಲಸಗಳು ನಡೆಯಲಿದೆ ಎಂದು ಹೇಳಿದರು. ಜಿಲ್ಲೆಯ ಎಲ್ಲಾ ತಾಲೂಕಿನ ಅಡಿಕೆ ವರ್ತಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.