ಉಜಿರೆ: ಗಾಂಧಿನಗರ ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ 12ನೇ ವರ್ಷದ ಮೊಸರು ಕುಡಿಕೆ ಹಾಗೂ ಶ್ರೀ ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಕ್ರೀಡಾಕೂಟ ಗಾಂಧಿನಗರ ಶಾಲಾ ವಠಾರದಲ್ಲಿ ಆ. 31ರಂದು ನಡೆಯಿತು.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಬದನಾಜೆ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ನಿರಂಜನ್ ಕೆ. ನೇರವೇರಿಸಿದರು. ಸ.ಕಿ.ಪ್ರಾಥಮಿಕ ಶಾಲೆ ಗಾಂಧಿನಗರ ಉಜಿರೆ ಇದರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಜೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ರವಿಚಂದ್ರ ವಹಿಸಿದ್ದರು. ವಿಶೇಷವಾಗಿ ಮುದ್ದು ಕೃಷ್ಣ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಮುಂಡತ್ತೋಡಿ ಪೆರ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ಸೇವಂತಿ ನಿರಂಜನ್, ಪಡ್ಲಾಡಿ ಶಾಲೆಯ ನಿವೃತ್ತ ಶಿಕ್ಷಕಿ ರಾಜೇಶ್ವರಿ, ಗಾಂಧಿನಗರ ಅಂಗನವಾಡಿ ಶಾಲೆಯ ಶಿಕ್ಷಕಿ ಸುಮಪ್ರಸಾದ್, ಮೈತ್ರಿ ಮಹಿಳಾ ಸಮಿತಿಯ ಅಧ್ಯಕ್ಷೆ ಗೀತಾ ಶಿವಪ್ರಸಾದ್, ಗೌರವಾಧ್ಯಕ್ಷ ನಿವಾಸ್ ಕೆ. ಹಾಗೂ ವಾಣಿ, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಗಾಂಧಿನಗರ, ಶಾರೀರಿಕ ಶಿಕ್ಷಕ ಸಂಜೀವ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿದರು.
ಮೈತ್ರಿ ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ಅವಿಲ್ ಲೋಬೋ, ಜೋತೆ ಕಾರ್ಯದರ್ಶಿ ಸುನೀತ್ ಹಾಗೂ ಸೂರಪ್ಪ, ಕ್ರೀಡಾ ಕಾರ್ಯದರ್ಶಿಗಳಾದ ಕಿರಣ್ ಮತ್ತು ಪ್ರವೀಣ್ ಗಾಂಧಿನಗರ ಹಾಗೂ ಮೈತ್ರಿ ಫ್ರೆಂಡ್ಸ್ ಕ್ಲಬ್ ಹಾಗೂ ಮೈತ್ರಿ ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.