ಬೆಳ್ತಂಗಡಿ: ಧರ್ಮಪ್ರಾಂತ್ಯದ ಪಾಲನಾ ಕೇಂದ್ರವಾದ ಜ್ಞಾನನಿಲಯದಲ್ಲಿ ಪಾಲನಾ ಸಮಿತಿಯಿಂದ ನೂತನ ಆಯ್ಕೆಗೊಂಡ ಮೊಂನ್ಸಿಜೋರ್ ಜೇಮ್ಸ್ ಪತ್ತೇರಿಲ್ ಅವರನ್ನು ಸ್ವಾಗತಿಸಲಾಯಿತು. ಪಾಲನಾ ಸಮಿತಿಯಲ್ಲಿ ಧರ್ಮಾಕ್ಷೆತ್ರದ ಆಡಳಿತಾಧಿಕಾರಕ್ಕೆ ಒಳಗೊಂಡ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಂದ ವಿಶೇಷ ಪ್ರತಿನಿಧಿಗಳು ಭಾಗವಹಿಸಿದರು.

ವೇಣೂರು ಧರ್ಮಕೇಂದ್ರದ ಆಲ್ವಿನ್, ಬೆಳ್ತಂಗಡಿ ಧರ್ಮಕೇಂದ್ರದ ಸಿರಿನ್, ಡಾ. ಸಿಸ್ಟೆರ್ ರೆಮ್ಶಿ ಸಿ.ಎಂ.ಸಿ, ಫಾ. ಸಣ್ಣಿ ಆಲಪ್ಪಾಟ್ಟ್ ನೂತನ ಬಿಷಪ್ ಅವರಿಗೆ ಧರ್ಮಕ್ಷೇತ್ರದ ಸರ್ವ ಜನತೆಯ ಸ್ವಾಗತ ಮತ್ತು ಸಹಕಾರದ ಭರವಸೆಯನ್ನು ಕೋರಿದರು. ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ನೂತನ ಧರ್ಮಾಧ್ಯಕ್ಷರಿಗೆ ಶುಭ ಕೋರಿದರು.