





ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಮಟ್ಟಣ್ಣನವರ್ ಎಂಬಾತನು ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿ ವೀಡಿಯೋದ ತುಣುಕನ್ನು ಜನತಾ ನ್ಯೂಸ್ ನಲ್ಲಿ ಹರಿಯಬಿಟ್ಟಿರುವ ಬಗ್ಗೆ ಗಿರೀಶ್ ಮಟ್ಟಣ್ಣನವರ್ ವಿರುದ್ಧ ರಾಜೇಂದ್ರ ದಾಸ್ ಡಿ. ಧರ್ಮಸ್ಥಳ ಎಂಬವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಎಸ್ ಪಿ ಕಚೇರಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು ಅದರಂತೆ “ ದಿನಾಂಕ 01-09-2025 ರಂದು ಪ್ರಕರಣದ ಫಿರ್ಯಾದುದಾರರಾದ ರಾಜೇಂದ್ರ ದಾಸ್ ಡಿ ಧರ್ಮಸ್ಥಳ ಎಂಬವರು ಉಜಿರೆ ಗ್ರಾಮದ ಉಜಿರೆ ಎಂಬಲ್ಲಿ ತನ್ನ ಮೊಬೈಲ್ ಮುಖೇನ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಿರುವಾಗ ಗಿರೀಶ್ ಮಟ್ಟಣ್ಣವರ್ ಎಂಬಾತನು ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುವ ರೀತಿಯಲ್ಲಿ ಅಶ್ಲೀಲವಾಗಿ ಮಾತನಾಡಿ ವೀಡಿಯೋದ ತುಣುಕನ್ನು ಜನತಾ ನ್ಯೂಸ್ ನಲ್ಲಿ ಹರಿಯಬಿಟ್ಟಿರುವುದಾಗಿದೆ ಎಂದು ಪಿರ್ಯಾದಿದಾರರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 101/2025 ಕಲಂ:296 BNS ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.”ಎಂದು ತಿಳಿಸಲಾಗಿದೆ.









