ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಭೆ

0

ಅಳದಂಗಡಿ: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯು 2025-26ನೇ ಶೈಕ್ಷಣಿಕ ವರ್ಷದಲ್ಲಿ 20ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸವಿನೆನಪಿಗಾಗಿ ಸಂಭ್ರಮದ ವಿಂಶತಿ ಆಚರಣೆಯನ್ನು ಯಶಸ್ಸಿನ ಉತ್ಸವವನ್ನಾಗಿಸುವ ಉದ್ದೇಶದಿಂದ ದ್ವಿತೀಯ ಹೆತ್ತವರ ಸಭೆಯನ್ನು ಆಯೋಜಿಸಲಾಯಿತು. ಶಾಲಾ ಸಂಚಾಲಕ ಫಾ.ಎಲಿಯಾಸ್ ಡಿಸೋಜ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಮೋನಿಕಾ ಡಿಸೋಜಾ ಅವರು ಶಾಲಾ ಚಟುವಟಿಕೆಗಳು ಹಾಗೂ ಶಾಲಾ ವಿಂಶತಿ ಆಚರಣೆ ಬಗ್ಗೆ ಪೋಷಕರೊಡನೆ ಚರ್ಚಿಸಿದರು.

ಪೋಷಕರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸ್ಟೀವನ್ ಪಾಯ್ಸ್ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲಿಯೋ ಪಿರೇರಾ ಹಾಗೂ ಶಿಕ್ಷಕ ರಕ್ಷಕ ಸಭೆಯ ಕಾರ್ಯದರ್ಶಿ ಸಹಶಿಕ್ಷಕಿ ರಾಜೇಶ್ವರಿ ಉಪಸ್ಥಿತರಿದ್ದರು. ಸಹಶಿಕ್ಷಕಿ ಲೀಲಾ ಸ್ವಾಗತಿಸಿ, ಸಹಶಿಕ್ಷಕಿ ಪ್ರೀತಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕಿ ಪ್ರೇಮ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here