
ಕಲ್ಲೇರಿ: ಕರ್ನಾಟಕ ಮುಸ್ಲಿಂ ಜಮಾಅತ್ ಕೆ.ಎಂ.ಜೆ ಕುಪ್ಪೆಟ್ಟಿ ಸರ್ಕಲ್ ನಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸೌಹಾರ್ದ ಸಂಗಮ ಕಾರ್ಯಕ್ರಮ ಜಂಯತುಲ್ ಉಲಮಾ ರಾಜ್ಯ ಸಮಿತಿ ಉಪಾಧ್ಯಕ್ಷ ಬಹು ಕಾಸಿಂ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಆ.29ರಂದು ತಣ್ಣೀರುಪಂತ ಸಹಕಾರಿ ಕೃಷಿ ಪತ್ತಿನ ಸಭಾಂಗಣದಲ್ಲಿ ಅಪರಾಹ್ನ ಮೂರು ಗಂಟೆಗೆ ಜರಗಿತು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾತನಾಡಿ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮುಸ್ಲಿಂ ಜಮಾಅತ್ ಕುಪ್ಪೆಟ್ಟಿ ಸರ್ಕಲ್ ವತಿಯಿಂದ ಹಮ್ಮಿಕೊಂಡ ಸೌಹಾರ್ದ ಸಂಗಮ ಬಹಳ ಅರ್ಥಪೂರ್ಣ ಕಾರ್ಯಕ್ರಮವಾಗಿದೆ, ಯಾಕೆಂದರೆ ನಮ್ಮ ದೇಶಕ್ಕೆ 79 ವರ್ಷಗಳ ಹಿಂದೆ ಸ್ವಾತಂತ್ರ್ಯ ದೊರೆಯಬೇಕಾದರೆ ಯಾವುದೇ ಜಾತಿ ಮತ ಧರ್ಮ ಭಾಷೆ ಬೇಧವಿಲ್ಲದೆ.
ಎಲ್ಲರೂ ಹೆಗಳಿಗೆ ಹೆಗಲು ಕೊಟ್ಟು ಹೋರಾಟ ಮಾಡಿದ ಕಾರಣದಿಂದಲೇ ನಮ್ಮ ದೇಶ ಸ್ವಾತಂತ್ರ್ಯ ಪಡಕೊಂಡಿದೆ ಎಂದರು. ಒಂದು ಕಡೆಯಿಂದ ಸೌಹಾರ್ದತೆಗೆ ಪ್ರಯತ್ನ ಪಡುತ್ತಿದ್ದರೆ ಇನ್ನೊಂದು ಕಡೆ ಸೌಹಾರ್ದತೆಯನ್ನು ಕೆಡಿಸುವಂತ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ ಯಾರು ಏನೂ ಮಾಡಿದರೂ ನಮ್ಮೂರಿನ ಸೌಹಾರ್ದತೆಯನ್ನು ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಮ್ಮ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ. ಬಹಳಷ್ಟು ಸಹಕಾರವನ್ನು ನೀಡುತ್ತಿದೆ ಇದರ ಸಹಕಾರವನ್ನು ಪಡೆದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು. ನಮ್ಮ ರಾಜ್ಯದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯರವರು ದಸರಾ ಹಬ್ಬವನ್ನು ಓರ್ವ ಮುಸ್ಲಿಂ ಮಹಿಳೆ ಬಾನು ಮುಷ್ತಾಕ್ ರವರ ಮುಖಾಂತರ ಉದ್ಘಾಟಿಸುವುದರೊಂದಿಗೆ ಸೌಹಾರ್ದತೆಗೆ ಅರ್ಥ ಕಲ್ಪಿಸಲಿದ್ದಾರೆ ಎಂದರು.
ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕರಾಯ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ನಡೆದ ಕಹಿ ಘಟನೆಗಳನ್ನು ನೆನಪಿಸಿಕೊಂಡರು. ಯುವ ವಾಗ್ಮಿ ಅತಾವುಲ್ಲ ಹಿಮಮಿ ಸಖಾಫಿ ಅವರು ಮಾತನಾಡಿ ನಾವೆಲ್ಲರೂ ಶಾಂತಿ ಸೌಹಾರ್ದತೆಯಿಂದ ಬದುಕುವುದರ ಮುಖಾಂತರ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳೋಣ ಎಂದರು.
ಸುನ್ನೀ ಜಂಯಿಯತುಲ್ ಮುಅಲ್ಲಿಮೀನ್ ಕುಪ್ಪೆಟ್ಟಿ ರೇಂಜ್ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ, ಪಂ. ಸದಸ್ಯ ಜಯವಿಕ್ರಂ, ಅಕ್ರಮ ಸಕ್ರಮ ಸಮಿತಿಯ ಸದಸ್ಯರೂ ಆದ ಅಯ್ಯೂಬ್ ಡಿ.ಕೆ., ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಕೆ.ಎಂ.ಜೆ ಝೋನ್ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಸರ್ಕಲ್ ಅಧ್ಯಕ್ಷ ಉಸ್ಮಾನ್ ಹಾಜಿ, ಪ್ರವೀನ್ ಹಳ್ಳಿಮನೆ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೋ, ಕೆ.ಎಂ.ಜೆ ಕೋಶಾಧಿಕಾರಿ ಅಬ್ದುಲ್ ರಝಾಕ್ ಸಖಾಫಿ, ಉರುವಾಲು ಸರ್ಕಲ್ ಅಧ್ಯಕ್ಷ ಕಾಸಿಂ ಪದ್ಮುಂಜ ಉಪಸ್ತಿತರಿದ್ದರು.
ಜಂಯಿಯತುಲ್ ಉಲಮಾ ರಾಜ್ಯ ಸಮಿತಿ ಸದಸ್ಯ ಪಿ.ಕೆ. ಮುಹಮ್ಮದ್ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆ.ಎಂ.ಜೆ ಕುಪ್ಪೆಟ್ಟಿ ಸರ್ಕಲ್ ಕಾರ್ಯದರ್ಶಿ ಕಾಸಿಂ ನೆಕ್ಕಿಲು ಧನ್ಯವಾದ ಸಲ್ಲಿಸಿದರು.