ಶಿಬಾಜೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆ: ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಶಿಬಾಜೆ ಗ್ರಾಮಸ್ಥರು

0

ಶಿಬಾಜೆ: ಶ್ರೀ ಕ್ಷೇತ್ರ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನ ಮಂಡಳಿ ಶಿಬಾಜೆ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಪೆರ್ಲ , ಶ್ರೀ ಭುವನೇಶ್ವರಿ ಭಜನಾ ಮಂಡಳಿ ಬೂಡದಮಕ್ಕಿ, ಗ್ರಾಮದ ದೇವಸ್ಥಾನಗಳ ಸಮಿತಿ ಇವರ ಸಹಭಾಗಿತ್ವದಲ್ಲಿ ಶಿಬಾಜೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಸಂರಕ್ಷಣಾ ಯಾತ್ರೆಯು ಆ. 29ರಂದು ನಡೆಯಿತು.

ಜಾತ್ರೆಯಲ್ಲಿ ಭವ್ಯವಾದ ರಥದ ಜೊತೆ ಶಿಬಾಜೆ ಗ್ರಾಮದ ಜನತೆಯು ಧರ್ಮಸ್ಥಳದ ಕಡೆ ವಾಹನಗಳ ಮೂಲಕ ಸಾಗಿ ಅಲ್ಲಿಂದ ಪಾದಯಾತ್ರೆಯ ಮೂಲಕ ದೇವಸ್ಥಾನ ತಲುಪಿ ಅಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು. ನಂತರ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿ ನಾನು ಆಗಲಿ ನನ್ನ ಕುಟುಂಬದವರಿಂದಾಗಲಿ ಧರ್ಮಕ್ಕೆ ಕುತ್ತು ತರುವ ಆಗಿಲ್ಲ ನಿಮ್ಮೆಲ್ಲರ ಈ ಪ್ರೀತಿ ನೋಡಿ ಸಂತಸವಾಗುತ್ತಿದೆ ಎಂದು ಭೇಟಿ ಮಾಡಿದ ಎಲ್ಲರಿಗೂ ಶುಭ ಹಾರೈಸಿದರು. ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರುಗಳು ಅನೇಕ ಹಿರಿಯರು ಮಹಿಳೆಯರು ಯುವಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here