
ಕೊಕ್ಕಡ: ಅಡ್ಡೆ ಶ್ರೀ ಶಿವಶಕ್ತಿ ಭಜನಾ ಮಂದಿರದ ನೂತನ ಭಜನಾ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ವಾಸ್ತುತಜ್ಞ ರತ್ನಾಕರ ಪಾಂಗಣ್ಣಾಯ ಮಿಯಾಳ ಅವರು ಶಿವನ್ಯಾಸ ಕಾರ್ಯಕ್ರಮದ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.

ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಆರ್ಥಿಕ ಸಹಕಾರದೊಂದಿಗೆ ಈ ಭಜನಾ ಮಂದಿರವು ನಿರ್ಮಾಣಗೊಳ್ಳಲಿದ್ದು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ಟ ಹಿತ್ತಲು, ಟ್ರಸ್ಟ್ ನ ಸದಸ್ಯರು ಧರ್ಣಪ್ಪ ಕೆಂಪಕೋಡಿ, ಪುರಂದರ ಕಡಿರ, ಬಾಬಿತಾ ರಾಘವ ಕೊಲ್ಲಜೆ, ಉದ್ಯಮಿ ಬಾಲಕೃಷ್ಣ ನೈಮಿಶ, ಹಿರಿಯರಾದ ಈಶ್ವರ ಭಟ್ ಹಿತ್ತಿಲು, ಶಿವಶಕ್ತಿ ಭಜನಾ ಮಂದಿರದ ಅಧ್ಯಕ್ಷ ರವಿಚಂದ್ರ ಪೊಡಿಕೆತ್ತೂರು, ಕಾರ್ಯದರ್ಶಿ ಆನಂದ ಅಡ್ಡೆ, ಪಿಲಿಚಾಮುಂಡಿ ದೈವಸ್ಥಾನ ಮಾಸ್ತಿಕಲ್ಲು ಮಜಲು ಇದರ ಆಡಳಿತ ಟ್ರಷ್ಟಿ ಕುಶಾಲಪ್ಪಗೌಡ ಪೊಡಿಕೇತ್ತೂರು, ಸ್ಥಳೀಯ ಪ್ರಮುಖರಾದ ಗಣೇಶ್ ಅಂಕದ ಮಜಲು, ಅಚ್ಚುತ ನಾಯ್ಕ ಅಡೀಲು, ಲಕ್ಷ್ಮೀ ಅಡ್ಡಯಿ, ಶೀನ ಅಡ್ಡಯಿ ಹಾಗೂ ಇತರರು ಉಪಸ್ಥಿತರಿದ್ದರು.