
ಉಜಿರೆ: ಕಳೆದ ಹಲವಾರು ವರ್ಷಗಳ ಹಿಂದ ಉಜಿರೆಯ ವರ್ತಕರ ಸಂಘ ಪ್ರಾರಂಭಗೊಂಡು ಉತ್ತಮ ಸಮಾಜ ಸೇವೆಗೈಯುತ್ತಿರುವ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಉಜಿರೆ ರಮ್ಯ 1 ಗ್ರಾಮ್ & ಫ್ಯಾನ್ಸಿ ಇದರ ಮಾಲಕ ಪ್ರಸಾದ್ ಬಿ.ಎಸ್ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಸುಪ್ರಿಮ್ ಲಾಡ್ಜ್ ಮಾಲಕ ಅಬೂಬಕ್ಕರ್, ಕೋಶಾಧಿಕಾರಿಯಾಗಿ ದುರ್ಗಾ ಮೊಬೈಲ್ಸ್ ಮಾಲಕ ವಿಶ್ವನಾಥ ಭಂಡಾರಿ ಹಾಗೂ ಉಪ ಸಮಿತಿಯನ್ನು ರಚಿಸಲಾಗಿದೆ.
ಆ. 31ರಂದು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯುವ ಪದಪ್ರದಾನ ಕಾರ್ಯಕ್ರಮದಲ್ಲಿ ಹಿಂದಿನ ವರ್ಷ ಒಳ್ಳೆಯ ಕೆಲಸ ನಿರ್ವಹಿಸಿದ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.