
ಬೆಳ್ತಂಗಡಿ: ಫಾ. ಜೇಮ್ಸ್ ಪಟ್ಟೇರಿಲ್ ಸಿ.ಎಂ.ಎಫ್. ಬೆಳ್ತಂಗಡಿ ಧರ್ಮಪ್ರಾಂತ್ಯವು ತನ್ನ ಎರಡನೇ ಬಿಷಪ್ ಆಗಿ ಫಾ. ಜೇಮ್ಸ್ ಪಟ್ಟೇರಿಲ್ ಸಿ.ಎಮ್.ಎಫ್. ಅವರನ್ನು ಸ್ವಾಗತಿಸುತ್ತಿದೆ. ದೇವರ ಒಬ್ಬ ವಿನಮ್ರ ಸೇವಕ ಹಾಗು ಕ್ಲಾರೆಶಿಯನ್ ಸಭೆಯ ನಂಬಿಕಸ್ತರಾದ ಬಿಷಪ್-ಇಲೆಕ್ಟ್ ಜೇಮ್ಸ್ ಅವರು ಪ್ರಾರ್ಥನೆ, ಸೇವೆ ಮತ್ತು ದೈವಿಕ ಜ್ಞಾನದಲ್ಲಿ ಆಳವಾಗಿ ಬೇರೂರಿರುವ ಅನುಭವದ ಸಂಪತ್ತನ್ನು ಹೊಂದಿರುತ್ತಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ ಬಿಷಪ್-ಇಲೆಕ್ಟ್ ಜೇಮ್ಸ್ ಅವರು ಜುಲೈ. 27 1962ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಅವರು ದಿ.ಅಬ್ರಹಾಂ ಪಟ್ಟೇರಿಲ್ ಮತ್ತು ಶ್ರೀಮತಿ ರೋಸಮ್ಮ ಪಟ್ಟೇರಿಲ್ ಅವರ ಪುತ್ರ. ಅವರು ಕ್ಲಾರೆಶಿಯನ್ ಸಭೆ (ಮಿಷನರಿ ಸನ್ಸ್ ಆಫ್ ದಿ ಇಮ್ಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ (ಸಿ.ಎಮ್.ಎಫ್.)ಯನ್ನು ಸೇರಿದರು ಮತ್ತು 12 ಜೂನ್ 1982 ರಂದು ಬೆಂಗಳೂರಿನ ಕ್ಲಾರೆಟ್ ಭವನ್, ಕಾರ್ಮೆಲಾರಂನಲ್ಲಿ ತಮ್ಮ ಮೊದಲ ಧಾರ್ಮಿಕ ಪ್ರಮಾಣವಚನ ಮಾಡಿದರು. ಆರು ವರ್ಷಗಳ ನಂತರ, ಅವರು ಜೂನ್ 12, 1988ರಂದು ಕೇರಳದ ಕುರವೀಲಂಗಾಡ್ನಲ್ಲಿರುವ ಕ್ಲಾರೆಟ್ ಭವನ್ನಲ್ಲಿ ತಮ್ಮ ನಿತ್ಯ ಧಾರ್ಮಿಕ ಪ್ರಮಾಣವಚನ ಮಾಡಿದರು.
ಅವರು ಬೆಂಗಳೂರಿನ ಸೇಂಟ್ ಪೀಟರ್ಸ್ ಫೋಂಟಿಫಿಕಲ್ ಸೆಮಿನರಿಯಲ್ಲಿ ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರದಲ್ಲಿ ಸ್ನಾತಕ ಪದವಿಗಳನ್ನು ಪಡೆದು, ಏಪ್ರಿಲ್ 26, 1990ರಂದು ಕೇರಳದ ತಲಶೇರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜಾರ್ಜ್ ವಲಿಯಮಟ್ಟಂರವರಿಂದ ಕಳಂಜದ ಸೇಂಟ್ ಸೆಬಾಸ್ಟಿಯನ್ ಚರ್ಚ್ನಲ್ಲಿ ಧರ್ಮಗುರುಗಳಾಗಿ ಅಭಿಷಿಕ್ತರಾದರು. ತದನಂತರ, ಅವರು ತಮ್ಮ ಧರ್ಮಸೇವಾ ಕಾರ್ಯವನ್ನು ಫ್ರಾಂಕ್ಫರ್ಟ್ನಲ್ಲಿ ಪ್ರಾರಂಭಿಸಲು ಜರ್ಮನಿಗೆ ತೆರಳಿದರು.
ಪಾಲಕೀಯ ಸೇವೆ ಮತ್ತು ಜವಾಬ್ದಾರಿಗಳು ಕಳೆದ ಮೂರು ದಶಕಗಳಲ್ಲಿ, ಬಿಷಪ್-ಇಲೆಕ್ಟ್ ಫಾ. ಜೇಮ್ಸ್ ಅವರು ಪಾಲಕೀಯ, ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಹಾಯಕ ಧರ್ಮಗುರು, ಸೇಂಟ್ ಥಾಮಸ್ ಫೊರೇನ್ ಚರ್ಚ್, ಉದನೆ, ನೆಟ್ಟಣ, ಗುತ್ತಿಗಾರು (1990-1991) ಆರ್ಥಿಕ ಸಹಾಯಕ, ಕ್ಲಾರೆಟ್ ಭವನ್, ಕುರವೀಲಂಗಾಡ್ (1991-1994)
ಅಸ್ಪತ್ರೆಯ ಆದ್ಯಾತ್ಮಿಕ ಸಲಹೆಗಾರ, ಫ್ಲೋರ್ಶೈಮ್ (1997-2004) ಆರ್ಥಿಕ ಸಹಾಯಕ, ಕ್ಲಾರೆಟಿನೆರ್-ಸೆಮಿನಾರ್, ಫ್ರಾಂಕ್ಫರ್ಟ್ (1998-2004) ಪ್ರಾಂತೀಯ ಆರ್ಥಿಕ ಸಹಾಯಕ (2004 ರಿಂದ)
ಸುಪೀರಿಯರ್, ವುರ್ಜ್ಬರ್ಗ್ ಹೌಸ್ (2005-2008, 2010-2011) ಮಿಷನ್ ಪ್ರೊಕ್ಯುರೇಟರ್ (2008 ರಿಂದ) ಈ ಪ್ರತಿಯೊಂದು ಜವಾಬ್ದಾರಿಗಳಲ್ಲಿ, ಅವರು ತಮ್ಮ ಸರಳತೆ, ಆರ್ಥಿಕ ಜವಾಬ್ದಾರಿ, ಪಾಲಕೀಯ ಸಂವೇದನೆ ಮತ್ತು ಸೇವೆಯ ಉತ್ಸಾಹದಿಂದ ಗುರುತಿಸಲ್ಪಟ್ಟಿದ್ದಾರೆ. ಅಸ್ಪತ್ರೆಯ ಆದ್ಯಾತ್ಮಿಕ ಸಲಹೆಗಾರನಾಗಿ ರೋಗಿಗಳು ಮತ್ತು ಸಂಕಟದಲ್ಲಿರುವವರ ನಡುವಿನ ಅವರ ಸೇವೆಯೊಂದಿಗೆ ಜನರ ಬಗ್ಗೆ ಅವರ ಕರುಣೆ ಮತ್ತು ವಿವೇಕದಿಂದ ಸಮುದಾಯಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಪಡೆದಿರುತ್ತಾರೆ.
.
ಬೆಳ್ತಂಗಡಿಗೆ ಒಬ್ಬ ಹೊಸ ಪಾಲಕ: ಬಿಷಪ್-ಇಲೆಕ್ಟ್ ಫಾ. ಜೇಮ್ಸ್ ಪಟ್ಟೇರಿಲ್ ಅವರು ಲಾರೆನ್ಸ್ ಮುಕ್ಕುಝಿ ಅವರ ಉತ್ತರಾಧಿಕಾರಿಯಾಗಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಎರಡನೇ ಬಿಷಪ್ ಆಗಿ ಹೊಸ ಸೇವೆಯನ್ನು ಆರಂಭಿಸಲಿದ್ದಾರೆ. ಅವರ ಬಿಷಪ್ ಸೇವೆಗೆ, ಧಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿರುವ ಸೀರೋ ಮಲಬಾರ್ ಕ್ರೈಸ್ತರನ್ನು ವಿಶ್ವಾಸ ಮತ್ತು ಪ್ರೀತಿಯಲ್ಲಿ ಮುನ್ನೆಡಿಸುವುದರೊಂದಿಗೆ ಇಲ್ಲಿನ ಜನಸಾಮಾನ್ಯರಿಗೆ ತಮ್ಮ ಸೇವೆ ಸಲ್ಲಿಸುವುದು ಇವರ ಉದ್ದೇಶವಾಗಿದೆ.
ಕ್ಲಾರೆಶಿಯನ್ ಸ್ಪಿರಿಟ್: ಬಿಷಪ್-ಇಲೆಕ್ಟ್ ಫಾ. ಜೇಮ್ಸ್ಸ್ ಸೇರಿದ ಕ್ಲಾರೆಶಿಯನ್ ಸಭೆಯನ್ನು ಸೇಂಟ್ ಆಂಥೋನಿ ಮೇರಿ ಕ್ಲಾರೆಟ್ ಮತ್ತು ಅವರ ಸಹಚರರು ಜುಲೈ 16, 1849ರಂದು ಸ್ಪೇನ್ನ ವಿಕ್ನಲ್ಲಿ ಸ್ಥಾಪಿಸಿದರು. ಅಧಿಕೃತವಾಗಿ ಮಿಷನರಿ ಸನ್ಸ್ ಆಫ್ ದಿ ಇಮ್ಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ (ಸಿ.ಎಮ್.ಎಫ್.) ಎಂದು ಕರೆಯಲ್ಪಡುವ ಕ್ಲಾರೆಶಿಯನ್ಸ್ ಇಂದು 76ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆಸಲ್ಲಿಸುತ್ತಿದೆ. ತಮ್ಮ ಸಂಸ್ಥಾಪಕರ ದೃಷ್ಟಿಯಿಂದ ಪ್ರೇರಿತರಾಗಿ, ಅವರು ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರಿಗೆ, ಪಾಲಕೀಯ ಸೇವೆ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯ ಮೂಲಕ ಸುವಾರ್ತೆಯ ಸಂತೋಷವನ್ನು ಸಾರುತ್ತಿದ್ದಾರೆ. ಒಬ್ಬ ನಿಷ್ಠಾವಂತ ಕ್ಲಾರೆಶಿಯನ್ ಆಗಿ, ಬಿಷಪ್-ಇಲೆಕ್ಟ್ ಜೇಮ್ಸ್ ಅವರು ಧರ್ಮಸಭೆಯಲ್ಲಿ ಸೇವೆಯ ಈ ಮನೋಭಾವವನ್ನು ಹೊಂದಿರುತ್ತಾರೆ. ಇದು ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಅದರ ನಂಬಿಕೆ ಮತ್ತು ಸೇವೆಯ ಹಾದಿಯಲ್ಲಿ ಮಾರ್ಗದರ್ಶನ ಸಹಾಯವಾಗಲಿದೆ.