ಜೆಸಿಐ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ತರಬೇತಿ ಸಮ್ಮೇಳನ-ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಪ್ರಶಸ್ತಿ ಹಾಗೂ ಮನ್ನಣೆಗಳು

0

ಬೆಳ್ತಂಗಡಿ: ಜೆಸಿಐ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ತರಬೇತಿ ಸಮ್ಮೇಳನವು ಕಾರ್ಕಳದ ಬಾಲಜಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಜೆಸಿಐ ಬೆಳ್ತಂಗಡಿಯ ಸದಸ್ಯತ್ವ ಬೆಳವಣಿಗೆ ಹೊಸ ಜೆಸಿಐ ಘಟಕದ ಕೊಡುಗೆ ಹಾಗೂ ಜೆಸಿಐ ಭಾರತದ ವಿದ್ಯಾರ್ಥಿ ವೇತನ ನೀಡುವ ಫೌಂಡೇಶನ್ ಗೆ ನೀಡಿದ ದೇಣಿಗೆಗಳನ್ನು ಪರಿಗಣಿಸಿ ಅತ್ಯುತ್ತಮ 10 ಘಟಕದಲ್ಲಿ ಟಾಪ್ 6 ಪ್ರಶಸ್ತಿ ಪಡೆಯಿತು.

ಅದೇ ರೀತಿ ತರಬೇತಿ ವಿಭಾಗದಲ್ಲಿ ತಾಲೂಕಿನ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ಜೇಸಿ ಸದಸ್ಯರಿಗಾಗಿ ನಡೆಸಿದ ಹಲವಾರು ತರಬೇತಿಗಳನ್ನು ಪರಿಗಣಿಸಿ ಉಡುಪಿ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಅತ್ಯುತ್ತಮ 10 ಘಟಕಗಳಲ್ಲಿ ಟಾಪ್ 3 ಪ್ರಶಸ್ತಿಗೆ ಜೆಸಿಐ ಬೆಳ್ತಂಗಡಿ ಪಡೆದುಕೊಂಡಿತು ಅದಲ್ಲದೆ ಇತರ ಕಾರ್ಯಕ್ರಮಗಳಿಗೆ ಹಲವಾರು ಮನ್ನಣೆ ಗಳಿಗೆ ಪಾತ್ರವಾಯಿತು.

ಜೆಸಿಐ ಭಾರತದ ವಲಯ 15ರ ವಲಯಾಧ್ಯಕ್ಷರಾದ ಅಭಿಲಾಶ್ ಬಿ.ಎ. ಅವರು ಪ್ರಶಸ್ತಿ ಪ್ರದಾನ ಮಾಡಿದರು. ವಲಯ ಉಪಾಧ್ಯಕ್ಷ ರಂಜಿತ್ ಹೆಚ್‌. ಡಿ. ಹಾಗೂ ವಲಾಯಾಡಳಿತ ಮಂಡಳಿಯ ಪದಾಧಿಕಾರಿಗಳು, ಪೂರ್ವ ವಲಯಾಧ್ಯಕ್ಷರು, ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಆಶಾಲತಾ ಪ್ರಶಾಂತ್, ಸದಸ್ಯರಾದ ಹೇಮಾವತಿ ಕೆ., ಭವ್ಯಶ್ರೀ ಕೀರ್ತಿರಾಜ್, ರಂಜನ್ ಗುಡಿಗಾರ್, ಶೈಲೇಶ್ ಕೆ,, ಪೂರ್ವಾಧ್ಯಕ್ಷರಾದ ಪ್ರಶಾಂತ್ ಲಾೖಲ, ಶಂಕರ್ ರಾವ್ ಬಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here