
ಬೆಳ್ತಂಗಡಿ: ಪಿ.ಓ. ತೋಮಸ್ (82 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಆ. 27ರಂದು ಮಧ್ಯಾಹ್ನ 1ಗಂಟೆಗೆ ಮಂಗಳೂರು ಸಮೀಪದ ವಾಮಜೂರು ಪಚ್ಚನಾಡಿ ಎಂಬಲ್ಲಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮಿತ್ತಬಾಗಿಲು ಗ್ರಾಮದ ಅಂಕರ ಪಾಲು, ಕಿಲ್ಲೂರು ಸಮೀಪದಲ್ಲಿ ವಾಸವಾಗಿದ್ದರು.
ಇವರು ಬಂಗಾಡಿ ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ, ನಿರ್ದೇಶಕ, ಮಿತ್ತಬಾಗಿಲು ಮಂಡಲ ಪಂಚಾಯಿತಿನ ಮಾಜಿ ಮಂಡಲ ಪ್ರಧಾನರು, ಕಾಂಗ್ರೆಸ್ಸಿನ ಕಾರ್ಯಕರ್ತರಾಗಿದ್ದರು. ಮಕ್ಕಳಾದ ಶಾಜು, ಶೆರ್ಲಿ, ಶೈಲಾ ಅವರನ್ನು ಅಗಲಿದ್ದಾರೆ.