
ಬೆಳ್ತಂಗಡಿ: ಆ. 26ರಂದು ಉಚ್ಚಿಲಗುಡ್ಡೆ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆ, ಸೋಮೇಶ್ವರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17 ವಯೋಮಿತಿಯ ಮಕ್ಕಳ ಕರಾಟೆ ಪಂದ್ಯಾಟದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಶಮಂತ್ (9ನೇ) ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

ವಿದ್ಯಾರ್ಥಿಯನ್ನು ಶಾಲಾ ಸಂಚಾಲಕ, ಗುರು ವೋಲ್ಟರ್ ಡಿಮೆಲ್ಲೋ ಹಾಗೂ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ಅಭಿನಂದಿಸಿದರು.