ದ.ಕ. ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಗುಡ್ಡಗಾಡು ಓಟ ಸ್ಪರ್ಧೆ: ಆಳ್ವಾಸ್‌ ಸೆಂಟ್ರಲ್ ಶಾಲೆಗೆ ಸಮಗ್ರ ಪ್ರಶಸ್ತಿ

0

ಬೆಳ್ತಂಗಡಿ: ಹಳೆಯಂಗಡಿಯ ಡಾ. ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದ.ಕ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಸೆಂಟ್ರಲ್ ಶಾಲೆಯ 14 ವರ್ಷ ವಯೋಮಿತಿಯ ಬಾಲಕರ ವಿಭಾಗದ 4ಕಿಮೀ ಓಟದಲ್ಲಿ ಓಂಕಾರ್ ಪ್ರಥಮ ಸ್ಥಾನ ಮತ್ತು ಪುನೀತ್ ಕುಮಾರ್ ತೃತೀಯ ಸ್ಥಾನ ಹಾಗೂ 17ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ 4ಕಿಮೀ ಓಟದಲ್ಲಿ ದಿಶಾ ಆರನೇ ಸ್ಥಾನ ಪಡೆದರು.

ಆ ಮೂಲಕ 14 ಹಾಗೂ 17 ವರ್ಷ ಬಾಲಕ ಬಾಲಕಿಯರ ಎರಡು ವಿಭಾಗದಲ್ಲಿ ಒಟ್ಟು 78 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.
ಮೋಹನ ಆಳ್ವ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here