
ಪುಂಜಾಲಕಟ್ಟೆ: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಫಿನಾನ್ಶಿಯಲ್ ಲಿಟರಸಿ ಏಂಡ್ ಇಟ್ಸ್ ಇಂಪ್ಯಾಕ್ಟ್ ಓನ್ ಸೇವಿಂಗ್ಸ್ ಏಂಡ್ ಇನ್ವೆಸ್ಟ್ಮೆಂಟ್ಸ್ ಒಫ್ ರೂರಲ್ ಹೌಸ್ ಹೋಲ್ಡ್ಸ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್’ ಎಂಬ ಪ್ರಬಂಧಕ್ಕೆ ಮೆಟಿಲ್ಡಾ ಪಾಯ್ಸ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಅವರು ಮೂಲತಃ ಮಾಲಾಡಿ ಗ್ರಾಮದ ಪೇರ್ಡೆ ನಿವಾಸಿ ಪಾವ್ಲ್ ಪಾಯ್ಸ್ ಹಾಗೂ ಸಿಸಿಲಿಯಾ ಲೋಬೊರವರ ಮಗಳು. ಪ್ರಸ್ತುತ ಅವರು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಪರಿಗಣಿತ ವಿಶ್ವವಿದ್ಯಾನಿಲಯ) ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಅಶ್ವಿನ್ ಮೆಂಡೋನ್ಸಾ ಅವರ ಜೊತೆ ವಿವಾಹವಾಗಿ ಇಬ್ಬರು ಗಂಡು ಮಕ್ಕಳ ಜೊತೆ ಜೀವನ ನಡೆಸುತ್ತಿದ್ದಾರೆ.