
ಬೆಳ್ತಂಗಡಿ: ಆ. 25ರಂದು ಪ್ರೌಢಶಾಲಾ ವಿಭಾಗ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಶಮುಕ್ತ ಭಾರತ ಅಭಿಯಾನದಲ್ಲಿ ಪ್ರೌಢಶಾಲಾ ಮಕ್ಕಳಿಗೆ ನಶಮುಕ್ತ ವಾತಾವರಣವನ್ನು ಕಲ್ಪಿಸುವ ಬಗ್ಗೆ ನಗರ ಪಂಚಾಯತ್ ನಗರ ಪುನರ್ವಸ್ಥಿ ಕಾರ್ಯಕರ್ತೆ ಫೌಝಿಯಾ ಪ್ರತಿಜ್ಞೆಯನ್ನು ಮಾಡಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.