
ಧರ್ಮಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುದುವೆಟ್ಟು ಗ್ರಾಮದ ನಿಡ್ವಾಳ ಗದ್ದೆಯಲ್ಲಿ “ಕಂಡಡ್ ಒಂಜಿ ದಿನ” ಕೆಸರು ಗದ್ದೆ ಕ್ರೀಡಾಕೂಟ ಆ.24ರಂದು ನಡೆಯಿತು.
ಕ್ರೀಡಾಕೂಟವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು. ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಅಧ್ಯಕ್ಷತೆ ವಹಿಸಿದ್ದರು.

ಧರ್ಮಸ್ಥಳದ ಹರಿ ಕೃಷ್ಣ ಅರ್ಬುಡಿತ್ತಾಯ, ಸ್ಥಳೀಯರಾದ ಚಿತ್ತರಂಜನ್ ಜೈನ್, ಜಯವರ್ಮ ಕಾಜವ, ನಿತ್ಯಾನಂದ ಗೌಡ, ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಾಕ್ಷ, ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಪುದುವೆಟ್ಟು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಂಗನಾಥ್, ಮಿಯ್ಯಾರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಜೀವನ್ ಕೆ., ಧರ್ಮಸ್ಥಳ ಸಹಕಾರ ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಮಾಜಿ ಅಧ್ಯಕ್ಷ ರತ್ನವರ್ಮ ಜೈನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಧರ್, ನಿರ್ದೇಶಕರು, ಸಂಘದ ಸದಸ್ಯರು ಊರವರು ಹಾಜರಿದ್ದರು. ದಾಮೋದರ ಪುದುವೆಟ್ಟು ಸ್ವಾಗತಿಸಿ,
ಹಿರಿಯ ದೈಹಿಕ ಠೇವಣಿ ಸಂಗ್ರಹಕ ಲೋಕೇಶ್ ಶೆಟ್ಟಿ, ವಿಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯ ಅತ್ತಾಜೆ, ಅಜಿತ್ ನಾಯರ್ ತೀರ್ಪು ಗಾರರಾಗಿ ಭಾಗವಹಿಸಿದ್ದರು.ಸಂಘದ ಸಿಬ್ಬಂದಿಗಳು ಸಹಕರಿಸಿದರು. ನಂತರ ವಿವಿಧ ಕ್ರೀಡಾ ಕೂಟಗಳಾದ 1ರಿಂದ 4ನೇ ತರಗತಿ ಮಕ್ಕಳಿಗೆ ಪಾಸಿಂಗ್ ಬಾಲ್,
ಮಹಿಳೆಯರಿಗೆ 5ರಿಂದ 7ನೇ ತರಗತಿ ಮಕ್ಕಳಿಗೆ 100 ಮೀ. ಓಟ ತೆಂಗಿನಕಾಯಿ ಬಿಸಾಡುವುದು ಹಾಳೆಓಟ, ಲಿಂಬೆ ಚಮಚ ಓಟ ಹಗ್ಗಜಗ್ಗಾಟ, 50 ಮೀ. ಓಟ ಪುರುಷರಿಗೆ 100 ಮೀ. ಓಟ, ಕಂಬಳ ಓಟ, ಕೊರಿಗೂಂಟ, ಹಾಳೆ ಓಟ, ಹಗ್ಗಜಗ್ಗಾಟ, ಅಡ್ಡ ಕಂಬ ಪಾಡ್ಡನ ಸಂಧಿ ಹೇಳುವುದು. 8ರಿಂದ 10ನೇ ತರಗತಿ ಮಕ್ಕಳಿಗೆ ಕೊರಿಗೊಂಟ, ಹಾಳೆ ಓಟ, ರಿಲೆ 100 ಹಿರಿಯರಿಗೆ (60 ವರ್ಷ ಮೇಲ್ಪಟ್ಟು) 50 ಮೀ. ನಿಧಾನಗತಿ ಓಟ ದಂಪತಿಗಳಿಗೆ ಉಪ್ಪು ಮುಡಿ, ಹಾಳೆ ಓಟ ಮೊದಲಾದ ಸ್ಪರ್ಧೆಗಳು ನಡೆಯಿತು.