
ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ ಕೆಎಂಜೆ ಉಜಿರೆ ಸರ್ಕಲ್ ಸಮಿತಿ ವತಿಯಿಂದ ಎಸ್.ಎಸ್.ಎಫ್ ಉಜಿರೆ ಸೆಂಟರ್ ಹಾಗೂ ಎಸ್‌ವೈಎಸ್ ಉಜಿರೆ ಸರ್ಕಲ್ ಸಹಭಾಗಿತ್ವದಲ್ಲಿ ಉಜಿರೆ ಹಳೆಪೇಟೆ ಮದರಸ ಸಭಾಂಗಣದಲ್ಲಿ “ಸ್ವಾತಂತ್ರ್ಯ ಸಂಗಮ” ಕಾರ್ಯಕ್ರಮ ಆ.23ರಂದು ಜರುಗಿತು. ಅಧ್ಯಕ್ಷತೆಯನ್ನು ಕೆಎಂಜೆ ಉಜಿರೆ ಸರ್ಕಲ್ ಅಧ್ಯಕ್ಷ ಹಾಜಿ ಹೈದರ್ ಮದನಿ ವಹಿಸಿದ್ದರು. ಉದ್ಘಾಟನೆಯನ್ನು ಕೆ.ಎಮ್.ಜೆ ಬೆಳ್ತಂಗಡಿ ಝೋನ್ ಸಮಿತಿ ಅಧ್ಯಕ್ಷ ಎಸ್. ಎಂ. ತಂಙಳ್ ನೆರವೇರಿಸಿದರು.
ಪ್ರಸ್ತಾವನೆಯನ್ನು ಉಜಿರೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಮುದರ್ರಿಸ್ ಯಾಸಿರ್ ಫಾಳಿಲಿ ಅಲ್ ಫುರ್ಕಾನಿ ನಡೆಸಿದರು. ಸ್ವಾತಂತ್ರ್ಯ ಸಂಗಮದ ಬಗ್ಗೆ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಹಾಗೂ ಉಮರ್‌ಕುಂಞಿ ನಾಡ್ಜೆ ಉಪನ್ಯಾಸ ನೀಡಿದರು. ಕೆ.ಎಮ್.ಜೆ ಉಜಿರೆ ಸರ್ಕಲ್ ಪ್ರಧಾನ ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್ ಕುಂಟಿನಿ ಕಾರ್ಯಕ್ರಮ ಸಂಯೋಜಿಸಿದರು.
ಕೆ.ಎಮ್.ಜೆ ಉಪಾಧ್ಯಕ್ಷ ಮುಹ್ಯುದ್ದೀನ್ ಉಜಿರೆ, ಜಿಲ್ಲಾ ಸದಸ್ಯ ಇಬ್ರಾಹಿಂ ಕಕ್ಕಿಂಜೆ, ಕೋಶಾಧಿಕಾರಿ ಹಂಝ ಮಾಚಾರ್, ದಅವಾ ಸೆಕ್ರೆಟರಿ ಹನೀಫ್ ಮುಸ್ಲಿಯಾರ್ ನಿಡಿಗಲ್, ಮೀಡಿಯಾ ಸೆಕ್ರೆಟರಿ ಅಬ್ದುರ್ರಝಾಕ್ ಫುರ್ಕಾನಿ ನಿಡಿಗಲ್, ಸಹಾಯ್ ಸೆಕ್ರೆಟರಿ ರಝಾಕ್ ಮಾಚಾರ್, ಪಬ್ಲಿಕ್ ರಿಲೇಶನ್ ಸೆಕ್ರೆಟರಿ ಹಮೀದ್ ಗಾಂಧಿನಗರ, ಆರ್ಗನೈಸೇಶನ್ ಸೆಕ್ರೆಟರಿ ಅಬೂಬಕ್ಕರ್ ಕಕ್ಕೇನ, ಉಪಾಧ್ಯಕ್ಷ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು. ಸರ್ಕಲ್ ವ್ಯಾಪ್ತಿಯ ಸೆಂಟರ್ ಗಳ ಪದಾಧಿಕಾರಿಗಳು, ಸಮೂಹ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಮುಂದಿನ ಕಾರ್ಯಯೋಜನೆಗಳ ಸರ್ಕುಲರ್ ವಾಚಿಸಿ ನಿರ್ದೇಶನ ನೀಡಲಾಯಿತು.