
ನಡ: ಪೆರ್ಮಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಆ. 23ರಂದು ಶಾಲಾ ವಠಾರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜಾ ನೆರವೇರಿಸಿದರು. ನಡ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆ ವಹಿಸಿದರು.
ಶತಮಾನೋತ್ಸವ ಸಮಿತಿ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಶತಮಾನೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀ ಸದಾಶಿವರುದ್ರ ದೇವಸ್ಥಾನ ಸೂರ್ಯ ಆಡಳಿತ ಮೊಕ್ತೇಸರ ಡಾ. ಸತೀಶ್ ಚಂದ್ರ ಸೂರ್ಯಗುತ್ತು ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಶಾಲಾ ಸ್ಥಾಪಕ ಮನೆತನದ ಧನಂಜಯ ಅಜ್ರಿ ನಡಗುತ್ತು, ಜಿ.ಪಂ. ಮಾಜಿ ಸದಸ್ಯ ಬಿ. ರಾಜಶೇಖರ್ ಅಜ್ರಿ, ಮಂಜೊಟ್ಟಿ ಸ್ಟಾರ್‌ಲೈನ್ ಶಿಕ್ಷಣ ಸಂಸ್ಥೆಯ ಸ್ಥಾಪಕ ಸೈಯದ್ ಹಬೀಬ್ ಸಾಹೇಬ್, ಉಪನ್ಯಾಸಕ ಅರುಣ್ ಡಿಸೋಜಾ, ನಿಟ್ಟೆ ಹೆಗ್ಡೆ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಜಸ್ಟಿಸ್ ಕೆ.ಎಸ್. ಭಾಗವಹಿಸಿ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಪುಷ್ಪಾ ಹಾಗೂ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು, ಅಧ್ಯಕ್ಷ ಜನಾರ್ಧನ ನಾಯ್ಕ, ಸದಸ್ಯರು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ಧರಣೇಂದ್ರ ಕುಮಾರ್, ಸದಸ್ಯರು, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.