ನೆಟ್ವರ್ಕ್ ಸಮಸ್ಯೆ ಬಗ್ಗೆ ಪ್ರಧಾನಿಯವರಿಗೆ ಆನ್‌ಲೈನ್ ಮನವಿ: ಮೂಡುಕೋಡಿಗೆ 4G BSNL ಟವರ್ ಮಂಜೂರು

0

ವೇಣೂರು: ದಶಕಗಳಿಂದ ಶಾಶ್ವತ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದ ವೇಣೂರು ಸಮೀಪದ ಮೂಡುಕೋಡಿ ಗ್ರಾಮಕ್ಕೆ ಇದೀಗ ಹೊಸ 4G ಟವರ್ ಮಂಜೂರುಗೊ೦ಡಿದ್ದು ಟವರ್ ನಿರ್ಮಾಣಕ್ಕೆ ಸ್ಥಳ ಗೊತ್ತುಪಡಿಸಲಾಯಿತು. ನೆಟ್ವರ್ಕ್ ಸಮಸ್ಯೆ ಬಗ್ಗೆ ಕುತ್ಲೂರು ಗ್ರಾಮದ ಸಂದೀಪ್ ಪೂಜಾರಿ ಪ್ರಧಾನಿಯವರಿಗೆ ಕಳೆದ ಜುಲೈ ನಲ್ಲಿ ಆನ್‌ಲೈನ್ ಮೂಲಕ ‌ಮನವಿ‌ ಮಾಡಿದ್ದರು. ಸ್ಥಳೀಯ ವಿಧ್ಯಾರ್ಥಿಗಳು ನೆಟ್ವರ್ಕ್ ಸಿಗುವ ಎತ್ತರದ ಜಾಗದಲ್ಲಿ ಕುಳಿತು ತಮ್ಮ ವಿಧ್ಯಾಭ್ಯಾಸ ನಡೆಸುವ ಫೋಟೊ ದಾಖಲೆ ಪ್ರಧಾನಿ ಕಛೇರಿಗೆ ಕಳುಹಿಸಿದ್ದರು.ತಕ್ಷಣ ಕಾರ್ಯಪ್ರವೃತ್ತರಾದ ಕಾರ್ಯಾಲಯ ಮಂಗಳೂರು BSNL ಕಛೇರಿಗೆ‌ ಇ ಮೈಲ್ ಮೂಲಕ ಆದೇಶ ನೀಡಿ ಟವರ್ ಮಂಜೂರುಗೊಳಿಸಿದೆ.

ಸಂದೀಪ್ ಕುತ್ಲೂರು ಅವರ ಆನ್‌ಲೈನ್ ಮನವಿಯ ಮೂರನೇ ಟವರ್ ಇದಾಗಿದೆ ಈ‌ ಹಿಂದೆ ಕುತ್ಲೂರು, ನೂರಾಳಬೆಟ್ಟು ಗ್ರಾಮಕ್ಕೆ ಆನ್‌ಲೈನ್ ಮನವಿ ನೀಡಿ ಟವರ್ ಮಂಜೂರುಗೊಳಿಸಿದ್ದರು.

LEAVE A REPLY

Please enter your comment!
Please enter your name here